ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ರೇವಣಸಿದ್ದೇಶ್ವರಸ್ವಾಮಿ ರಥೋತ್ಸವ ನಾಳೆ

ಅವ್ವೇರಹಳ್ಳಿಯಲ್ಲಿ ಸಿದ್ಧತೆ ಪೂರ್ಣ
Last Updated 15 ಮೇ 2022, 4:46 IST
ಅಕ್ಷರ ಗಾತ್ರ

ರಾಮನಗರ: ತಾಲ್ಲೂ‌ಕಿನ ಅವ್ವೇರಹಳ್ಳಿಯಲ್ಲಿರುವ ರೇವಣಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವು ಭಾನುವಾರದಿಂದ ಆರಂಭಗೊಳ್ಳಲಿದ್ದು, ಸೋಮವಾರ ಮಹಾರಥೋತ್ಸವ ನಡೆಯಲಿದೆ.

ಭಾನುವಾರ ಬೆಳಿಗ್ಗೆ 7 ಗಂಟೆಗೆ ಗಿರಿಜಾ ಕಲ್ಯಾಣ ನಡೆಯಲಿದೆ. ಸಂಜೆ 5 ಗಂಟೆಗೆ ಅವ್ವೇರಹಳ್ಳಿ ಸುತ್ತಮುತ್ತಲಿನ ಸೇವಾ ಗ್ರಾಮಗಳಿಂದ ಭಕ್ತರು ಬಸವೇಶ್ವರ ಅಗ್ನಿಕೊಂಡಕ್ಕೆ ಎಳವಾರ ಸೌದೆ ತರಲಿದ್ದಾರೆ. 16ರಂದು ಬೆಳಿಗ್ಗೆ 6 ಗಂಟೆಗೆ ಅಗ್ನಿಕೊಂಡ ಮಹೋತ್ಸವ ಹಾಗೂ ಮಧ್ಯಾಹ್ನ 12ಕ್ಕೆ ರಥೋತ್ಸವ ನಡೆಯಲಿದೆ.

17 ರಂದು ಬೆಳಿಗ್ಗೆ ಗಿರಿ ಪ್ರದಕ್ಷಿಣೆ, ಮಧ್ಯಾಹ್ನ ಅವ್ವೇರಹಳ್ಳಿ, ನೆಲಮಲೆ, ಚಿಕ್ಕೇನಹಳ್ಳಿ ಗ್ರಾಮಸ್ಥರಿಂದ ಅರವಟಿಗೆ ಕಾರ್ಯಕ್ರಮವಿದೆ. ರಾತ್ರಿ 8 ಗಂಟೆಗೆ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ. 18ರಂದು ಬೆಳಿಗ್ಗೆ 9 ಗಂಟೆಗೆ ತೀರ್ಥಸ್ನಾನ, ಮಧ್ಯಾಹ್ನ 11.50ಕ್ಕೆ ರೇಣುಕಾಂಭ ದೇವಿಯ ರಥೋತ್ಸವ, ಪೂಜಾರಿ ದೊಡ್ಡಿ ಗ್ರಾಮಸ್ಥರಿಂದ ಅರವಟಿಗೆ ಹಾಗೂ ಸಂಜೆ 5 ಗಂಟೆಗೆ ಅಮ್ಮನಪುರ ಗ್ರಾಮಸ್ಥರಿಂದ ಶಯನೋತ್ಸವ ನಡೆಯಲಿದೆ.

ಧಾರ್ಮಿಕ ದತ್ತಿ ಇಲಾಖೆ, ದಾಸೋಹ ಮಠ, ಶ್ರೀರೇವಣಸಿದ್ದೇಶ್ವರಸ್ವಾಮಿ ಅಭಿವೃದ್ಧಿ ಸೇವಾ ಟ್ರಸ್ಟ್‌ನಿಂದ ಹಾಗೂ ಸೇವಾ ಗ್ರಾಮಗಳಾದ ಅವ್ವೇರಹಳ್ಳಿ, ನೆಲಮಲೆ, ಕೆ.ಜಿ. ಹೊಸಹಳ್ಳಿ, ಅಮ್ಮನಪುರ, ತೆಂಗಿನಕಲ್ಲು, ದೇವರದೊಡ್ಡಿ, ಕುರುಬಳ್ಳಿದೊಡ್ಡಿ, ಕೋಟಹಳ್ಳಿ, ಪೂಜಾರಿ ದೊಡ್ಡಿ, ಕೆರೆಮೇಗಳದೊಡ್ಡಿ, ಹುಲಿಕೆರೆ, ಗುನ್ನೂರು, ಕಡ್ಲೆ ಸುಬ್ಬಯ್ಯನದೊಡ್ಡಿ, ಸಾಹುಕಾರ್‍ದೊಡ್ಡಿ, ಸಬ್ಬಕೆರೆ ಗ್ರಾಮಸ್ಥರಿಂದ ಜಾತ್ರಾ ಮಹೋತ್ಸದ ದಿನಗಳಲ್ಲಿ ಅನ್ನ ಸಂತರ್ಪಣೆ ನಡೆಯಲಿದೆ ಎಂದು ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಎಸ್.ಜೆ. ಯೇಸುರಾಜ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT