ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾವಿನ ಬಗೆ ಬಗೆ ಖಾದ್ಯ ಪ್ರಾತ್ಯಕ್ಷಿಕೆ

Published 24 ಜೂನ್ 2024, 7:43 IST
Last Updated 24 ಜೂನ್ 2024, 7:43 IST
ಅಕ್ಷರ ಗಾತ್ರ

ಮಾಗಡಿ: ತಾಲ್ಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಸಖಿಯರಿಗೆ ಮಾವಿನ ಹಣ್ಣಿನಿಂದ ತಯಾರಿಸಬಹುದಾದ ವಿವಿಧ ಖಾದ್ಯಗಳ ಕೌಶಲ ತರಬೇತಿ ಆಯೋಜಿಸಲಾಗಿತ್ತು.

ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ.ಲತಾ ಆರ್.ಕುಲಕರ್ಣಿ ಮಾತನಾಡಿ, ಮಾವಿನ ಹಣ್ಣು ಹೆಚ್ಚಿನ ಪ್ರಮಾಣದ ನಾರಿನಂಶ ಹೊಂದಿರುತ್ತದೆ ಮತ್ತು ಬೀಟಾ ಕ್ಯಾರೋಟಿನ್ (ಎ ಜೀವಸತ್ವ ಪೂರ್ವಗಾಮಿ) ಮತ್ತು ಸಿ ಜೀವಸತ್ವಗಳ ಉತ್ತಮ ಮೂಲವಾಗಿದೆ ಎಂದರು.

ಆಯಾ ಋತುಗಳಲ್ಲಿ ಸಿಗುವ ಹಣ್ಣುಗಳನ್ನು ಸಂಸ್ಕರಿಸುವುದು ಅತಿ ಅವಶ್ಯ. ಇದರಿಂದ ಹಣ್ಣು ಹಾಳಾಗುವದನ್ನು ತಡೆಗಟ್ಟಬಹುದು ಎಂದರು.

ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಾವಿನ ಹಣ್ಣಿನಿಂದ ತಯಾರಿಸಿರುವ ವಿವಿಧ ಖಾದ್ಯ
ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಾವಿನ ಹಣ್ಣಿನಿಂದ ತಯಾರಿಸಿರುವ ವಿವಿಧ ಖಾದ್ಯ

ತರಬೇತಿಯಲ್ಲಿ ವಿವಿಧ ವೈವಿಧ್ಯಮಯ ಖಾದ್ಯಗಳಾದ ಮಾವಿನ ಜಾಮ್, ಮಾವಿನ ಸ್ಕ್ವಾಷ್, ಮಾವಿನ ಪಾನಕ ಮತ್ತು ಮಾವಿನ ಉಪ್ಪಿನಕಾಯಿ ತಯಾರಿಕಾ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT