ಭಾನುವಾರ, ಅಕ್ಟೋಬರ್ 2, 2022
19 °C

ಮಾಧುಸ್ವಾಮಿ ಜೊತೆ ಮಾತನಾಡಿದ್ದು ನಾನೇ: ಭಾಸ್ಕರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ‘ಸಚಿವ ಮಾಧುಸ್ವಾಮಿ ಜೊತೆ ಫೋನಿನಲ್ಲಿ ಮಾತನಾಡಿರುವುದು ನಾನೇ. ಸಹಕಾರ ಬ್ಯಾಂಕ್‌ನಲ್ಲಿನ ಅನ್ಯಾಯದ ಬಗ್ಗೆ ದೂರು ನೀಡಲು ಕರೆ ಮಾಡಿದ್ದೆ’ ಎಂದು ಚನ್ನಪಟ್ಟಣದ ಸಾಮಾಜಿಕ ಹೋರಾಟಗಾರ ಭಾಸ್ಕರ್ ಎಂಬುವರು ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಭಾಸ್ಕರ್ ‘ನಾನು ಮುಖ್ಯಮಂತ್ರಿ ಬೊಮ್ಮಾಯಿ, ಸಚಿವ ಸಿ.ಸಿ. ಪಾಟೀಲ್, ಎಸ್.ಟಿ. ಸೋಮಶೇಖರ್, ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೂ ಕರೆ ಮಾಡಿದ್ದೆ. ಆದರೆ, ಅವರು ಯಾರು ಕರೆ ಸ್ವೀಕರಿಸಲಿಲ್ಲ. ಸಚಿವ ಮಾಧುಸ್ವಾಮಿ ಮಾತ್ರ ಕರೆ ಸ್ವೀಕರಿಸಿದರು’ ಎಂದು ಮಾಹಿತಿ ನೀಡಿದರು.

‘ಸಚಿವರ ಅಸಹಾಯಕತೆ ಕುರಿತು ಆಡಿಯೋ ಹಂಚಿಕೊಂಡಿದ್ದೇನೆ. ಬೇಕಾ ದರೆ, ಆಡಿಯೊ ವೈರಲ್ ಆಗಿರುವ ಕುರಿತು ನನ್ನ ಮೇಲೆ ಕ್ರಮ ಜರುಗಿಸಲಿ. ಜವಾಬ್ದಾರಿ ನಿರ್ವಹಿಸಲು ಆಗಲಿಲ್ಲವಾದರೆ ರಾಜೀನಾಮೆ ನೀಡಲಿ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು