ಮಂಗಳವಾರ, ಜನವರಿ 21, 2020
28 °C

ಜಮ್ಮುವಿನಲ್ಲಿ ಮಾಗಡಿಯ ಯೋಧ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಜಮ್ಮುವಿನ ಉಧಂಪುರ ಕ್ಯಾಂಪಿನಲ್ಲಿ ಕಾರ್ಯ‌ ನಿರ್ವಹಿಸುತ್ತಿದ್ದ ಯೋಧ ವೆಂಕಟ‌ ನರಸಿಂಹಮೂರ್ತಿ (29) ಮಂಗಳವಾರ ಸಂಜೆ ಸಾವನ್ನಪ್ಪಿದ್ದಾರೆ. ಸದ್ಯ ಮಾಗಡಿಯ ಹೊಂಬಾಳಪೇಟೆಯಲ್ಲಿ ಇರುವ ಅವರ ಮನೆಯಲ್ಲಿ ದುಃಖ ಮಡುಗಟ್ಟಿದೆ. 

ಯೋಧನ ಸಾವಿಗೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ. ಗುರುವಾರ ರಾತ್ರಿ‌ ಇಲ್ಲವೇ ಶುಕ್ರವಾರ ಮೃತದೇಹವನ್ನು‌ ಮಾಗಡಿಗೆ ತರುವ ನಿರೀಕ್ಷೆ ಇದೆ. 

ಹೊಂಬಾಳಪೇಟೆಯ ಪಾಪಣ್ಣ ಅವರ ಇಬ್ಬರು ಮಕ್ಕಳ ಪೈಕಿ ಕಿರಿಯನಾದ ವೆಂಕಟ ಬಾಲ್ಯದ‌ ದಿನಗಳಲ್ಲಿ ಉತ್ತಮ ಕುಸ್ತಿಪಟು. ಬಿಬಿಎಂ ಪದವಿ‌ ಓದಿ ಐದು ವರ್ಷಗಳ ಹಿಂದೆ ಸೇನೆಗೆ ಸೇರಿದ್ದರು. ಇದೀಗ ಅವರ ಸಾವಿನ ಸುದ್ದಿ‌ ಕೇಳಿ ತಂದೆ-ತಾಯಿಗೆ ಆಘಾತವಾಗಿದೆ.

ಪ್ರತಿಕ್ರಿಯಿಸಿ (+)