ಸೋಮವಾರ, ನವೆಂಬರ್ 18, 2019
27 °C

ವಿಶೇಷ ಉಪನ್ಯಾಸ ಕಾರ್ಯಕ್ರಮ

Published:
Updated:
Prajavani

ಕನಕಪುರ: ‘ಸಮಾಜದಲ್ಲಿ ಮಹಿಳೆಯರಿಗೆ ಸಮಾನತೆ ನೀಡಬೇಕೆಂಬುದರ ಬಗ್ಗೆ ವಚನ ಸಾಹಿತ್ಯದಲ್ಲಿ ತಿಳಿಸಲಾಗಿದೆ’ ಎಂದು ಗ್ರಾಮ ವಿದ್ಯಾ ಪ್ರಚಾರಕ ಸಂಘದ ಅಧ್ಯಕ್ಷ ಕೆ.ಬಿ.ನಾಗರಾಜು ತಿಳಿಸಿದರು.

ಇಲ್ಲಿನ ರೂರಲ್‌ ಪದವಿ ಕಾಲೇಜಿನ ಎಸ್‌.ಕೆ.ಮೆಮೊರಿಯಲ್‌ ಹಾಲ್‌ನಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೆ.ಎಂ.ದೊಡ್ಡಿ ಭಾರತಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಸಿ.ಪಿ.ನಾಗರಾಜು ‘ವಚನಗಳಲ್ಲಿ ವೈಚಾರಿಕತೆ’ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.

ಆರ್‌ಇಎಸ್‌ ಕಾರ್ಯದರ್ಶಿ ಸಿ.ರಮೇಶ್‌, ಪ್ರಾಂಶುಪಾಲ ಡಾ. ಎಂ.ಗೋವಿಂದಪ್ಪ, ಕನ್ನಡ ವಿಭಾಗದ ಮುಖ್ಯಸ್ಥೆ ಎಂ.ಕೆ.ಶಾಂತಕುಮಾರಿ ಇದ್ದರು.

ಪ್ರತಿಕ್ರಿಯಿಸಿ (+)