ಸೋಮವಾರ, ಜೂನ್ 21, 2021
26 °C
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಚನ್ನಪಟ್ಟಣ, ಮಾಗಡಿಯಲ್ಲಿ ಉತ್ತಮ ಫಲಿತಾಂಶ: ರಾಮನಗರ, ಕನಕಪುರಕ್ಕೆ "ಬಿ’ ಗ್ರೇಡ್‌

ಎಸ್ಸೆಸ್ಸೆಲ್ಸಿ | ರಾಮನಗರ ಜಿಲ್ಲೆಗೆ 'ಎ’ ಗ್ರೇಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ರಾಮನಗರ ಜಿಲ್ಲೆಯು ‘ಎ’ ದರ್ಜೆಯ ಗರಿ ಪಡೆದಿದೆ.

ಒಟ್ಟಾರೆ ಶೇ 88.88ರಷ್ಟು ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ. ಕಳೆದ ವರ್ಷವೂ ಇದೇ ಪ್ರಮಾಣದ ಫಲಿತಾಂಶ ಬಂದಿತ್ತು. ಆದರೆ ಶಿಕ್ಷಣ ಇಲಾಖೆ ಪಟ್ಟಿ ಮಾಡಿರುವ ಎ ದರ್ಜೆಯ ಜಿಲ್ಲಾವಾರು ಪಟ್ಟಿಯಲ್ಲಿ ರಾಮನಗರವು ಎಂಟನೇ ಸ್ಥಾನದಲ್ಲಿದೆ. ಜಿಲ್ಲೆಯು ಕಳೆದ ವರ್ಷ ರಾಜ್ಯಕ್ಕೆ ಎರಡನೇ ಸ್ಥಾನದಲ್ಲಿ ಇತ್ತು. ಜಿಲ್ಲೆಯಲ್ಲಿ ಈ ವರ್ಷ ಒಟ್ಟು 12,540 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಈ ಬಾರಿಯ ಫಲಿತಾಂಶವನ್ನು ಸರ್ಕಾರವು ಗ್ರೇಡ್‌ ಪ್ರಮಾಣದ ಮೂಲಕ ಅಳೆಯುವ ನೀತಿಯನ್ನು ತಂದಿದೆ. ಅದರಂತೆ ಜಿಲ್ಲೆಯ ಚನ್ನಪಟ್ಟಣ ಹಾಗು ಮಾಗಡಿ ತಾಲೂಕುಗಳು ಎ ಗ್ರೇಡ್ ಪಡೆದಿದ್ದರೆ, ಕನಕಪುರ ಹಾಗು ರಾಮನಗರ ತಾಲೂಕು ಬಿ ಗ್ರೇಡ್ ಪಡೆದುಕೊಂಡಿವೆ.

ಜಿಲ್ಲೆಯ 70 ಸರ್ಕಾರಿ ಶಾಲೆಗಳು, 38 ಅನುದಾನಿತ ಶಾಲೆಗಳು ಹಾಗೂ 77 ಖಾಸಗಿ ಶಾಲೆಗಳು ಎ ದರ್ಜೆಯ ಫಲಿತಾಂಶ ಪಡೆದುಕೊಂಡಿವೆ. 36 ಸರ್ಕಾರಿ ಶಾಲೆ, 24 ಅನುದಾನಿತ ಶಾಲೆ, 16 ಖಾಸಗಿ ಶಾಲೆಗಳು ಬಿ ಗ್ರೇಡ್‌ನಲ್ಲಿವೆ. 18 ಸರ್ಕಾರಿ ಶಾಲೆ, 7 ಅನುದಾನಿತ ಶಾಲೆ, 5 ಖಾಸಗಿ ಶಾಲೆಗಳು ಸಿ ದರ್ಜೆಗೆ ತೃಪ್ತಿ ಪಟ್ಟುಕೊಂಡಿವೆ.

ಚನ್ನಪಟ್ಟಣ ತಾಲ್ಲೂಕಿನಲ್ಲಿ 65 ಪ್ರೌಢಶಾಲೆಗಳಿದ್ದು, ಇದರಲ್ಲಿ 56 ಶಾಲೆಗಳು ಎ ದರ್ಜೆ, 6 ಶಾಲೆಗಳು ಬಿ ದರ್ಜೆ ಹಾಗೂ 3 ಶಾಲೆ ಸಿ ಗ್ರೇಡ್ ಪಡೆದಿವೆ. ಮಾಗಡಿ ತಾಲ್ಲೂಕಿನ 66 ಶಾಲೆಗಳಲ್ಲಿ 52 ಶಾಲೆಗಳು ಎ ದರ್ಜೆ, 13ಶಾಲೆಗಳು ಬಿ ದರ್ಜೆ, 1 ಶಾಲೆ ಸಿ ದರ್ಜೆ ಪಡೆದಿದೆ. ಕನಕಪುರ ತಾಲ್ಲೂಕಿನ 79 ಶಾಲೆಗಳಲ್ಲಿ 37 ಶಾಲೆಗಳು ಎ ದರ್ಜೆ, 31 ಶಾಲೆ ಬಿ ಹಾಗು 11 ಶಾಲೆಗಳು ಸಿ ದರ್ಜೆ ಪಡೆದುಕೊಂಡಿವೆ. ರಾಮನಗರ ತಾಲೂಕಿನ 81 ಶಾಲೆಗಳ ಪೈಕಿ 40 ಶಾಲೆಗಳು ಎ ದರ್ಜೆ, 26 ಶಾಲೆಗಳು ಬಿ ಹಾಗು 15 ಶಾಲೆಗಳು ಸಿ ದರ್ಜೆ ಫಲಿತಾಂಶ ದಾಖಲಿಸಿವೆ.

ಮೊದಲ ಐದು ಸ್ಥಾನ ಪಡೆದವರು

ಮಾಗಡಿಯ ವಾಸವಿ ವಿದ್ಯಾನಿಕೇತನ ಶಾಲೆಯ ಎಸ್‌.ಡಿ. ಪ್ರಜ್ಞಾ 620 ಅಂಕ ಪಡೆಯುವ ಜಿಲ್ಲೆಗೆ ಮೊದಲ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಮಾಗಡಿಯ ಮಾರುತಿ ಪಬ್ಲಿಕ್ ಶಾಲೆಯ ಜಿ.ಎಸ್. ಪುರುಷೋತ್ತಮ್ ಹಾಗು ಕನಕಪುರ ತಾಲೂಕಿನ ಜಕ್ಕಸಂದ್ರದ ಜೈನ್ ವಿದ್ಯಾನಿಕೇತನ್ ಶಾಲೆಯ ಸಿ. ಸಾತ್ವಿಕ್ 619 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಹಂಚಿಕೊಂಡಿದ್ದಾರೆ.

ರಾಮನಗರದ ಹೋಲಿಕ್ರೆಸೆಂಟ್ ಶಾಲೆಯ ಎ.ಎನ್. ಜೀವಿತಾ ರಾಣಿ ಹಾಗು ಕನಕಪುರದ ಸೇಂಟ್‌ ಮೈಕಲ್ ಶಾಲೆಯ ಎಂ. ಸಂಗೀತಾ 618 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದಿದ್ದಾರೆ.

ಅಂಕಿ-ಅಂಶ
291-ಜಿಲ್ಲೆಯಲ್ಲಿನ ಒಟ್ಟು ಶಾಲೆಗಳು
185-ಎ ಗ್ರೇಡ್‌ ಪಡೆದ ಶಾಲೆಗಳು
76-ಬಿ ಗ್ರೇಡ್‌ ಪಡೆದ ಶಾಲೆಗಳು
30- ಸಿ ಗ್ರೇಡ್‌ ಪಡೆದ ಶಾಲೆಗಳು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು