ಗುರುವಾರ , ಜೂನ್ 17, 2021
21 °C

ಸಾಂಕೇತಿಕ ಸೂರ್ಯಮಂಡಲೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ಪಟ್ಟಣದ ತಿರುಮಲೆ ತಿರುವೆಂಗಳನಾಥ ರಂಗನಾಥಸ್ವಾಮಿ ಜಾತ್ರೆಯು ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ರದ್ದಾಗಿದೆ. ಆದರೆ, ಸಾಂಪ್ರದಾಯಿಕವಾಗಿ ಪೂಜಾಧಿಗಳು ನಡೆಯಬೇಕು ಎಂಬ ಉದ್ದೇಶದಿಂದ ಭಾನುವಾರ ಬೆಳಿಗ್ಗೆ ದೇವಾಲಯದ ಪೌಳಿಯ ಒಳಗೆ ಸೂರ್ಯಮಂಡಲೋತ್ಸವ ನಡೆಯಿತು ಎಂದು ತಹಶೀಲ್ದಾರ್‌ ಬಿ.ಜಿ. ಶ್ರೀನಿವಾಸ ಪ್ರಸಾದ್‌ ತಿಳಿಸಿದ್ದಾರೆ.

ಸಪ್ತಾಶ್ವಗಳ ಮೇಲೆ ರಥಕ ಅರುಣ, ಅರುಣದೇವನ ಮೇಲೆ ಸೂರ್ಯದೇವರ ಪ್ರಭಾವಳಿ, ಪ್ರಭಾವಳಿಯ ಒಳಗೆ ಉಭಯ ಅಮ್ಮನವರ ಸಹಿತ ರಂಗನಾಥಸ್ವಾಮಿ, ಮುತ್ತಿನ ಮಣಿಗಳ ಅಲಂಕಾರ ನೋಡುಗರಲ್ಲಿ ಭಕ್ತಿಯ ಪರವಶತೆ ಮೂಡಿಸುವಂತಿತ್ತು. 

ಶೇಷವಾಹನ ಉತ್ಸವ: ರಂಗನಾಥಸ್ವಾಮಿ ಶೇಷವಾಹನ ಉತ್ಸವ ಸಂಜೆ ನಡೆಯಿತು. ಕೋವಿಡ್‌ ಹಿನ್ನೆಲೆಯಲ್ಲಿ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿತ್ತು.

ಅರ್ಚಕರು ಮತ್ತು ದೇವಾಲಯದ ಸಿಬ್ಬಂದಿ ಸಾಂಕೇತಿಕವಾಗಿ ಉತ್ಸವ ನಡೆಸಿದರು. ತಿರುವೆಂಗಳನಾಥ ರಂಗನಾಥ ಸ್ವಾಮಿ ಮತ್ತು ಉಭಯ ಅಮ್ಮನವರಿಗೆ ವಿಶೇಷ ಅಲಂಕಾರ ಮಾಡಿ ಆದಿಶೇಷನ ಆಭರಣ ತೊಡಿಸಲಾಗಿತ್ತು. ಪುಳಿಯೊಗರೆ, ಪಾನಕ ವಿತರಿಸಲಾಯಿತು. ಶೇಷವಾಹನ ಉತ್ಸವ ದೇಗುಲದ ಪೌಳಿಯ ಒಳಗೆ ನಡೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು