ಶುಕ್ರವಾರ, ಜೂಲೈ 10, 2020
23 °C

ರಾಮನಗರ | ಎ ದರ್ಜೆಯ ದೇಗುಲಗಳಲಿಲ್ಲ ದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಸರ್ಕಾರದ ಆದೇಶದ ನಡುವೆಯೂ ಜಿಲ್ಲೆಯಲ್ಲಿನ ಎ ದರ್ಜೆಯ ದೇಗುಲಗಳು ಸೋಮವಾರ ಬಾಗಿಲು ತೆರೆದಿಲ್ಲ. ಬಿ ಹಾಗೂ ಸಿ ದರ್ಜೆಯ ದೇಗುಲಗಳಲ್ಲಷ್ಟೇ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.

ಕಬ್ಬಾಳು, ಕೆಂಗಲ್ ಆಂಜನೇಯ, ಮಾಗಡಿ ರಂಗನಾಥಸ್ವಾಮಿ, ಚನ್ನಪಟ್ಟಣದ ಅಪ್ರಮೇಯಸ್ವಾಮಿ ಸೇರಿದಂತೆ ಪ್ರಮುಖ ದೇಗುಲಗಳ ಬಾಗಿಲು ಮುಚ್ಚಿವೆ. ಈ ದೇವಾಲಯಗಳ ಆರಂಭಕ್ಕೆ ಜಿಲ್ಲಾಡಳಿತ ಇನ್ನೂ ಅನುಮತಿ ನೀಡಿಲ್ಲ.

ಸರ್ಕಾರದ ಆದೇಶ ನೋಡಿಕೊಂಡು, ಉಳಿದ ದೇಗುಲಗಳಲ್ಲಿ ಭಕ್ತರ ಪ್ರತಿಕ್ರಿಯೆ ಆಧರಿಸಿ ಅನುಮತಿ ಬಗ್ಗೆ ನಿರ್ಧರಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ 865 ದೇವಾಲಯಗಳಿವೆ. ಅದರಲ್ಲಿ 7 ಎ ದರ್ಜೆ, 3 ಬಿ ದರ್ಜೆ ಹಾಗು ಉಳಿದ 855 ದೇಗುಲಗಳು ಸಿ ದರ್ಜೆಗೆ ಸೇರಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು