ಬಿಡದಿ: ಇಲ್ಲಿನ ಕೈಗಾರಿಕಾ ಪ್ರದೇಶದ ತಾಳಗುಪ್ಪದಲ್ಲಿರುವ ಕ್ವಾಲಿಟಿ ಥರ್ಮೋಪ್ಯಾಕ್ ಅಂಡ್ ಇನ್ಸುಲೇಷನ್ ಇಂಡಸ್ಟ್ರೀಸ್ನಲ್ಲಿ ಶನಿವಾರ ಸಂಜೆ ಶಾರ್ಟ್ ಸರ್ಕೀಟ್ನಿಂದಾಗಿ ಬೆಂಕಿ ಹೊತ್ತಿಕೊಂಡು, ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿಗಳು ಬೆಂಕಿಗೆ ಆಹುತಿಯಾದವು.

ಫ್ಯಾಕ್ಟರಿಯಲ್ಲಿ ಸಂಜೆ 6.15ಕ್ಕೆ ಸಣ್ಣದಾಗಿ ಕಾಣಿಸಿಕೊಂಡ ಬೆಂಕಿಯು ಕೆಲವೇ ಕ್ಷಣಗಳಲ್ಲಿ ಇತರೆಡೆಗೂ ವ್ಯಾಪಿಸಿತು. ಕೂಡಲೇ ಭದ್ರತಾ ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದರು. ಸ್ಥಳಕ್ಕೆ ಮೂರು ವಾಹನಗಳೊಂದಿಗೆ ಬಂದ ಅಗ್ನಿಶಾಮಕ ಅಧಿಕಾರಿ ಮೋಹನ ಮುದಿಗೌಡರ ನೇತೃತ್ವ ತಂಡವು ಸತತ 3 ತಾಸು ಕಾರ್ಯಾಚರಣೆ ನಡೆಸಿ ಅಗ್ನಿ ನಂದಿಸಿತು.

ಘಟನೆ ಸಂದರ್ಭದಲ್ಲಿ ಭದ್ರತಾ ಸಿಬ್ಭಂದಿ ಬಿಟ್ಟರೆ ಬೇರೆ ಕಾರ್ಮಿಕರು ಇರಲಿಲ್ಲ. ಫ್ಯಾಕ್ಟರಿ ಒಳಗಿರುವ ಕಚ್ಚಾ ಹಾಗೂ ಸಿದ್ಧ ಸಾಮಗ್ರಿಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿವೆ. ಬೆಂಕಿಯ ತೀವ್ರತೆಗೆ ಕಪ್ಪು ಹೊಗೆಯು ಮುಗಿಲೆತ್ತರಕ್ಕೆ ಕಾಣುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.