15ರಂದು ಟಿಪ್ಪು ಸುಲ್ತಾನ್ ಜಯಂತಿ

ಮಾಗಡಿ: ಪಟ್ಟಣದ ಬಿ.ಕೆ. ರಸ್ತೆಯ ಎಫ್.ಎಂ.ಕೆ. ಹೌಸ್‌ನಲ್ಲಿ ಕರ್ನಾಟಕ ಸ್ವಾಭಿಮಾನಿ ಮುಸ್ಲಿಂ ಕನ್ನಡಿಗರ ರಕ್ಷಣಾ ವೇದಿಕೆಯಿಂದ ನ. 15ರಂದು ಹಜರತ್ ಟಿಪ್ಪುಸುಲ್ತಾನ್ ಶಹೀದ್ ರಹಮತ್ ಉಲ್ಲಾ ಅವರ 271ನೇ ಜಯಂತಿ ಆಚರಿಸಲಾಗುವುದು ಎಂದು ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರೇಷ್ಮಾ ತಾಜ್ ತಿಳಿಸಿದರು.
ಪಟ್ಟಣದ ಬಿ.ಕೆ. ರಸ್ತೆಯ ಎಫ್.ಎಂ.ಕೆ ಹೌಸ್‌ನ ವೇದಿಕೆಯ ಕಚೇರಿಯಲ್ಲಿ ಶನಿವಾರ 271ನೇ ಟಿಪ್ಪು ಜಯಂತಿಯ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಶಾಸಕ ಎ. ಮಂಜುನಾಥ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಎಚ್.ಎಂ. ರೇವಣ್ಣ, ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ, ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷ, ಟಿಪ್ಪು ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಖಾಸಿಂ ಅಲಿ, ಅಕ್ಕೈ ಪದ್ಮಶಾಲಿ, ಪುರಸಭೆ ಉಪಾಧ್ಯಕ್ಷ ರಹಮತ್, ಸದಸ್ಯರಾದ ರಿಯಾಜ್, ಶಬೀರ್ ಖಾನ್, ಫಿರ್ದೋಶ್ ಅಂಜುಂ ಜಮೀರ್ ಪಾಷಾ, ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಮೊಹಮ್ಮದ್ ಖಾಜಾ, ಜಿಲ್ಲಾ ಅಧ್ಯಕ್ಷ ಆಸೀಫ್ ಪಾಷಾ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯ ಡಾ.ಪ್ರಕಾಶ್ ಕೆ. ಅವರು ಟಿಪ್ಪು ಸುಲ್ತಾನ್ ಕುರಿತು ಉಪನ್ಯಾಸ ನೀಡಲಿದ್ದಾರೆ. ವೇದಿಕೆಯ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಮುಸ್ಲಿಂ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ವೇದಿಕೆಯ ಮುಖಂಡರಾದ ತಬಸ್ಸುಮ್ ಸುಲ್ತಾನ, ಶಬಾನಾ, ಸಲಿಮಾಬಾನು, ಸೈಯದ್ ತಯ್ಯಬ್, ಸಾಹಿತಿ ಡಿ. ಶಿವಶಂಕರ್, ಸಂಶೋಧಕ ಮಾಯಣ್ಣ ಚಲವಾದಿ, ನರಸಿಂಹಮೂರ್ತಿ, ಅಸ್ಮಾಬಾನು, ಬೀಬಿ ಹಾಜೀರಾ, ಸಾನಿಯಾ ಬಾನು
ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.