ರಾಮನಗರ: ‘ವಿಧಾನ ಪರಿಷತ್ನ ಶಿಕ್ಷಕರ ಕೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಅವರು ಖಾಸಗಿ ಶಿಕ್ಷಣ ಸಂಸ್ಥೆಗಳ ಹಾಗೂ ಶಿಕ್ಷಕರ ಪರ ಗಟ್ಟಿ ದನಿಯಾಗಿದ್ದಾರೆ. ಅವರು ಆಂಧ್ರ ಶಿಕ್ಷಣ ಸಂಸ್ಥೆಗಳ ಪಿಆರ್ಒ ಆಗಿದ್ದಾರೆ ಎಂದಿರುವ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿ ಎ.ಪಿ ರಂಗನಾಥ್, ಆ ಕುರಿತು ದಾಖಲೆ ಬಿಡುಗಡೆ ಮಾಡಿ ತಮ್ಮ ಹೇಳಿಕೆ ಸಾಬೀತುಪಡಿಸಲಿ’ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಸವಾಲು ಹಾಕಿದರು.

‘ವಕೀಲರಾಗಿರುವ ರಂಗನಾಥ್ ದಾಖಲೆ ಸಮೇತ ಆರೋಪ ಮಾಡಲಿ. ನಿಜವಿದ್ದರೆ ನಾವೂ ಒಪ್ಪಿಕೊಂಡು ಪುಟ್ಟಣ್ಣ ಅವರನ್ನು ವಿರೋಧಿಸುತ್ತೇವೆ. ಈ ರೀತಿ ಸುಳ್ಳು ಆರೋಪ ಮಾಡುತ್ತಿರುವುದನ್ನು ನೋಡಿದರೆ, ಚುನಾವಣೆಯಲ್ಲಿ ಅವರಿಗೆ ಸೋಲಿನ ಭಯ ಕಾಡತೊಡಗಿದೆ ಎನಿಸುತ್ತದೆ’ ಎಂದು ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕೋವಿಡ್ನಿಂದ ಸಂಕಷ್ಟದಲ್ಲಿದ್ದ ಖಾಸಗಿ ಶಿಕ್ಷಕರಿಗೆ ಪುಟ್ಟಣ್ಣ ನೆರವಾಗಿದ್ದಾರೆ. ಸರ್ಕಾರದಿಂದ ಭತ್ಯೆ ಸಿಗುವಂತೆ ಮಾಡುವಲ್ಲಿ ಅವರ ಕೊಡುಗೆ ದೊಡ್ಡದು. ಪರಿಷತ್ ಸದಸ್ಯರಾಗಿದ್ದಾಗ ಶಿಕ್ಷಕರ ಯಾವುದೇ ಸಮಸ್ಯೆಗಳಿದ್ದರೂ ಪಕ್ಷಾತೀತವಾಗಿ ದನಿ ಎತ್ತಿ, ಸ್ಪಂದಿಸುವ ಕೆಲಸ ಮಾಡಿದ್ದಾರೆ. ಶಿಕ್ಷಕರ ಹಕ್ಕಿಗಾಗಿ ಅವರ ನೇತೃತ್ವದಲ್ಲಿ ಹಲವು ಹೋರಾಟಗಳು ನಡೆದಿವೆ. ರಂಗನಾಥ್ ಅವರು ಶಿಕ್ಷಕರ ಪರ 15 ಹೋರಾಟಗಳನ್ನು ಎಲ್ಲೆಲ್ಲಿ ನಡೆಸಿದರು ಎಂಬುದನ್ನು ಹೇಳಬೇಕು’ ಎಂದು ಹೇಳಿದರು.

‘ಪುಟ್ಟಣ್ಣ ಅವರು ಯಾವ ಶಿಕ್ಷಣ ಸಂಸ್ಥೆಗಳಿಗೂ ಪಿಆರ್ಒ ಆಗಿರಲಿಲ್ಲ. ಶಿಕ್ಷಕರಿಗೆ ಸಮಸ್ಯೆ ಎದುರಾದಾಗಲೆಲ್ಲಾ ನೆರವಿಗೆ ದಾವಿಸಿದ್ದಾರೆ. ಅವರನ್ನು ಪಿಆರ್ಒ ಎನ್ನುವುದಾದರೆ ಅದೇ ರೀತಿ ನಮ್ಮ ನೆರವಿಗೆ ನಿಂತಿರುವ ಬಸವರಾಜ ಹೊರಟ್ಟಿ, ಮರಿತಿಬ್ಬೇಗೌಡ ಅವರೆಲ್ಲರನ್ನೂ ಪಿಆರ್ಒ ಎಂದು ತಿರಸ್ಕರಿಸಬೇಕು. ರಂಗನಾಥ್ ಹೇಳಿಕೆ ನೋವುಂಟು ಮಾಡಿದ್ದು, ಶಿಕ್ಷಕರ ಪರ ಇರುವ ನಾಯಕರಿಗೆ ಅಗೌರವ ಉಂಟು ಮಾಡುವಂತಿದೆ. ಈ ಚುನಾವಣೆಯಲ್ಲಿ ಶಿಕ್ಷಕರು ರಂಗನಾಥ್ ಅವರನ್ನು ತಿರಸ್ಕರಿಸಲಿದ್ದಾರೆ’ ಎಂದು ಹೇಳಿದರು.

‘ಜೆಡಿಎಸ್ ಮತ್ತು ಬಿಜೆಪಿಯಲ್ಲಿ ಗೆದ್ದಿದ್ದ ಪುಟ್ಟಣ್ಣ ಅವರಿಗೆ ಅಲ್ಲಿ ಸರಿಯಾಗಿ ಕೆಲಸ ಮಾಡಲು ಬಿಡದಿದ್ದಾಗ ಪಕ್ಷ ತೊರೆದಿದ್ದಾರೆ. ಎಲ್ಲರಂತೆ ಅವರು ಸಹ ಅಧಿಕಾರಕ್ಕಾಗಿ ಅಂತಹ ನಿರ್ಧಾರ ಕೈಗೊಂಡಿದ್ದಾರೆ. ಅವರು ವಿಧಾನಸಭೆಯಲ್ಲಿರಬೇಕಿತ್ತು ಎಂಬುದು ನಮ್ಮ ಅಭಿಲಾಷೆ ಕೂಡ ಆಗಿತ್ತು. ಇದೀಗ ಮತ್ತೆ ಅವರನ್ನು ಪರಿಷತ್ಗೆ ಕೊಡಲು ನಾವೆಲ್ಲ ಪಣ ತೊಟ್ಟಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದ ರಾಮನಗರ ಜಿಲ್ಲಾ ಅಧ್ಯಕ್ಷ ಪಟೇಲ್ ರಾಜು, ಕಾರ್ಯದರ್ಶಿ ಸುನೀಲ್, ರಾಮನಗರ ಅಧ್ಯಕ್ಷ ಬಾಲಗಂಗಾಧರ ಮೂರ್ತಿ, ಪ್ರದೀಪ್ ಹಾಗೂ ಅಲ್ತಾಫ್ ಇದ್ದರು.

ಖಾಸಗಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ, ಅವರಿಗೆ ದನಿಯಾಗಿರುವ ಪುಟ್ಟಣ್ಣ ಅವರನ್ನು ಉಪ ಚುನಾವಣೆಯಲ್ಲಿ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟವು ಬೆಂಬಲಿಸುತ್ತದೆ
– ಡಿ. ಶಶಿಕುಮಾರ್, ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.