ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಚ್ಚಿದ ಕುಡಿಯುವ ನೀರಿನ ಸಮಸ್ಯೆ

ಬೋರ್‌ವೆಲ್ ಮೊರೆಹೋದ ಜನ
Published 3 ಏಪ್ರಿಲ್ 2024, 5:04 IST
Last Updated 3 ಏಪ್ರಿಲ್ 2024, 5:04 IST
ಅಕ್ಷರ ಗಾತ್ರ

ಹಾರೋಹಳ್ಳಿ: ನೀರಿನ ಸಮಸ್ಯೆ ಕಾಣಿಸಿಕೊಂಡ ಕೆಲವು ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್‌ಗಳಿಂದ ನೀರು ಖರೀದಿ ಮಾಡಲಾಗುತ್ತಿದೆ.

ಎಲ್ಲಿ ಹೆಚ್ಚು ಸಮಸ್ಯೆ: ತಾಲ್ಲೂಕಿನ ಟಿ. ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಹೆಚ್ಚು ಸಮಸ್ಯೆ ಇದೆ. ಮರಳವಾಡಿ ಗ್ರಾಮ ಪಂಚಾಯಿತಿ ಹಾಗೂ ಚೀಲೂರು ಗ್ರಾಮ ಪಂಚಾಯಿತಿಯ ಕೆಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ.

ಎಲ್ಲೆಲ್ಲಿ ಖರೀದಿ: ತಾಲ್ಲೂಕಿನ ಟಿ.ಹೊಸಹಳ್ಳಿ ಗ್ರಾ.ಪಂ ವ್ಯಾಪ್ತಿಯ ಬಳೇಚೆನ್ನವಲಸೆ ಗ್ರಾಮದಲ್ಲಿ ತಿಂಗಳಿಗೆ ₹22 ಸಾವಿರದಂತೆ  ನೀರು ಖರೀದಿ ಮಾಡಿ ಸರಬರಾಜು ಮಾಡಲಾಗುತ್ತಿದೆ. ಅಲ್ಲದೇ ಮರಳವಾಡಿ, ತೋಕಸಂದ್ರ, ಕಗ್ಗಲ್ಲಹಳ್ಳಿ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿ ರೈತರಿಂದ ಖರೀದಿ ಮಾಡಿ ಪೂರೈಸಲಾಗುತ್ತಿದೆ.

ಬನವಾಸಿ ಗ್ರಾ.ಪಂಯ ಉರುಗನದೊಡ್ಡಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಹೊಸದಾಗಿ ಬೋರ್‌ವೆಲ್ ಕೊರೆಸಲಾಗಿದೆ.

ಚೀಲೂರು ಗ್ರಾ.ಪಂ ವ್ಯಾಪ್ತಿಯ ಹನುಮಂತನಗರ ಗ್ರಾಮದ ಕಾಲೋನಿಯ ಬೀದಿಯಲ್ಲಿ ಅರ್ಧದಷ್ಟು ಮನೆಗಳಿಗೆ ಕೆಲವು ತಿಂಗಳಿಂದ ಸರಿಯಾಗಿ ನೀರು ಬರುತ್ತಿಲ್ಲ ಎಂದು ಗ್ರಾಮದ ಮಹಿಳೆಯರು ಅಳಲು ತೋಡಿಕೊಂಡರು.

ಸಹಾಯವಾಣಿ ಸ್ಥಾಪನೆ: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಹಾಯವಾಣಿ ಪ್ರಾರಂಭಿಸಲಾಗಿದೆ. ಗ್ರಾಮೀಣ ಪ್ರದೇಶ ಜನತೆಗೆ 7259377801, 9739322768 ಹಾಗೂ ನಗರ ಪ್ರದೇಶ ಜನತೆ 9731376469ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದು.

ಹನುಮಂತನಗರ ಗ್ರಾಮದ ಕಾಲೋನಿಯ ಬೀದಿಯ ಚರಂಡಿಯಲ್ಲಿ ಪೈಪ್ ಹಾದು ಹೋಗಿರುವುದು
ಹನುಮಂತನಗರ ಗ್ರಾಮದ ಕಾಲೋನಿಯ ಬೀದಿಯ ಚರಂಡಿಯಲ್ಲಿ ಪೈಪ್ ಹಾದು ಹೋಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT