ಸೋಮವಾರ, ಆಗಸ್ಟ್ 19, 2019
28 °C

ವೀಳ್ಯದೆಲೆ ತೋಟಕ್ಕೆ ಬಿಳಿಹುಳು ದಾಳಿ

Published:
Updated:
Prajavani

ಕುದೂರು (ಮಾಗಡಿ): ಹೋಬಳಿಯ ರಂಗಯ್ಯನ ಪಾಳ್ಯದಲ್ಲಿನ 115 ರೈತರ ತೋಟದಲ್ಲಿನ ವೀಳ್ಯದೆಲೆಗೆ ರಸಹೀರುವ ಬಿಳಿ ಹುಳುಗಳು ಕಾಣಿಸಿಕೊಂಡಿವೆ.

ರೈತರ ಮನವಿಯ ಮೇರೆಗೆ ತಾಲ್ಲೂಕು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಎನ್‌.ಬಿ. ನಾಗರಾಜು, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ರಾಜೇಂದ್ರ ಭೇಟಿ ನೀಡಿ ಪರಿಶೀಲಿಸಿದರು. ಬಿಳಿ ಹುಳುಗಳ ನಿಯಂತ್ರಣದ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ರವಿಕುಮಾರ್‌ ಇದ್ದರು.

Post Comments (+)