ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣುಮಕ್ಕಳು ಕೀಳರಿಮೆ ತೊರೆಯಿರಿ- ಎಸ್. ಲಿಂಗೇಶ್ ಕುಮಾರ್

ಕೇಂಬ್ರಿಜ್ ವಿದ್ಯಾಸಂಸ್ಥೆಯಲ್ಲಿ ಮಹಿಳೆಯರ ಸಂಭ್ರಮ
Last Updated 9 ಮಾರ್ಚ್ 2022, 8:23 IST
ಅಕ್ಷರ ಗಾತ್ರ

ಚನ್ನಪಟ್ಟಣ: ‘ಹೆಣ್ಣುಮಕ್ಕಳು ಕೀಳರಿಮೆ ತೋರದೆ ಎಲ್ಲಾ ಕ್ಷೇತ್ರಗಳಲ್ಲೂ ಗಂಡು ಮಕ್ಕಳಿಗೆ ಪೈಪೋಟಿ ನೀಡಬೇಕು’ ಎಂದು ಕೇಂಬ್ರಿಜ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಸ್. ಲಿಂಗೇಶ್ ಕುಮಾರ್ ಕಿವಿಮಾತು ಹೇಳಿದರು.

ನಗರದ ಮಹದೇಶ್ವರ ನಗರದ ಕೇಂಬ್ರಿಜ್ ವಿದ್ಯಾಸಂಸ್ಥೆ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು ಪುರುಷರಷ್ಟೇ ಸಮಾನರು. ಹಾಗಾಗಿ, ಅದು ಪಠ್ಯ ಅಭ್ಯಾಸವಾಗಿರಲಿ ಅಥವಾ ಪಠ್ಯೇತರ ಚಟುವಟಿಕೆಯಾಗಿರಲಿ ಮಹಿಳೆಯರು ಎಲ್ಲಾ ವಿಚಾರದಲ್ಲೂ ಸಾಧನೆ ಮಾಡಬೇಕು. ಸಮಾಜದಲ್ಲಿ ಹಲವಾರು ಮಹಿಳೆಯರು ಉನ್ನತ ಸಾಧನೆ ಮಾಡಿದ್ದಾರೆ. ಅವರನ್ನು ಮಾರ್ಗದರ್ಶಕರನ್ನಾಗಿಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ಶೈಕ್ಷಣಿಕ ವೇಳೆಯಲ್ಲಿ ಅನ್ಯ ವಿಚಾರಗಳತ್ತ ಗಮನ ನೀಡದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಆಲೋಚನೆ ಮಾಡಬೇಕು. ಪಿಯುಸಿ ಜೀವನದ ಅತ್ಯಂತ ಮಹತ್ತರವಾದ ಘಟ್ಟ. ಜೀವನದಲ್ಲಿ ಏನಾದರೂ ಉನ್ನತ ಸಾಧನೆ ಮಾಡಲು ಮನಸ್ಸು ಮಾಡಿದರೆ ಅದು ಈ ಘಟ್ಟದಲ್ಲೇ ನಿರ್ಧಾರವಾಗಬೇಕು ಎಂದು ಹೇಳಿದರು.

ಶಾಲೆಯಿಂದ ಕಾಲೇಜಿಗೆ ಬಂದಿರುವ ಸಮಯದಲ್ಲಿ ಅನಗತ್ಯ ವಿಚಾರಗಳು ಬರುವುದು ಸರ್ವೆ ಸಾಮಾನ್ಯ. ಅವೆಲ್ಲವನ್ನು ಮೆಟ್ಟಿನಿಂತು ಉತ್ತಮವಾಗಿ ಅಭ್ಯಾಸ ಮಾಡಿ ಬದುಕು ಕಟ್ಟಿಕೊಳ್ಳಬೇಕು ಎಂದರು.

ಸಂಸ್ಥೆಯ ಟ್ರಸ್ಟಿ ಎಂ.ಆರ್. ಚಿತ್ರಾ ಮಾತನಾಡಿ, ಮಹಿಳಾ ದಿನಾಚರಣೆಯಂದು ಹೆಣ್ಣುಮಕ್ಕಳು ತಮ್ಮ ಬದುಕನ್ನು ಸ್ವಾವಲಂಬಿಯನ್ನಾಗಿಸಿಕೊಳ್ಳುವ ಶಪಥ ಮಾಡಬೇಕು. ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ಛಾಪು ಮೂಡಿಸುವ ಪ್ರಯತ್ನ ಮಾಡಬೇಕು. ಉನ್ನತ ವ್ಯಾಸಂಗ ಮಾಡಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಹಾಗೆಯೇ, ಸಮಾಜಕ್ಕೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.

ಶಾಲೆಯ ಪ್ರಾಂಶುಪಾಲೆ ರೇಖಾ ಮ್ಯಾಥ್ಯೂ, ಉಪನ್ಯಾಸಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT