ಬುಧವಾರ, ನವೆಂಬರ್ 25, 2020
22 °C

ವಂಡರ್‌ಲಾ ಮತ್ತೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಬಿಡದಿಯ ವಂಡರ್‌ಲಾ ಅಮ್ಯೂಸ್‌ಮೆಂಟ್‌ ಪಾರ್ಕ್‌‌ನಲ್ಲಿ ಇದೇ 20ರಿಂದ ವಾಟರ್‍ ರೈಡ್‌ ಕ್ರೀಡೆಗಳು ಸಹ ಆರಂಭ ಆಗಲಿವೆ.

ಕೋವಿಡ್ ಹಿನ್ನೆಲೆಯಲ್ಲಿ ಸುಮಾರು ಎಂಟು ತಿಂಗಳ ಕಾಲ ಬಂದ್‌ ಆಗಿದ್ದ ಈ ಪಾರ್ಕ್‌ ಇದೇ 13ರಿಂದ ಮತ್ತೆ ಮನೋರಂಜನಾ ಸೇವೆ ಆರಂಭಿಸಿತ್ತು.‌

ಇದೀಗ ನೀರಿನಲ್ಲಿ ಆಡುವ ಕ್ರೀಡೆಗಳಿಗೂ ಅನುಮತಿ ದೊರೆತಿದೆ. ಕೋವಿಡ್‌ ಸುರಕ್ಷತಾ ಕ್ರಮಗಳೊಂದಿಗೆ ದಿನಕ್ಕೆ ಗರಿಷ್ಠ 4 ಸಾವಿರ ಮಂದಿಗೆ ಪ್ರವೇಶ ಸೀಮಿತಗೊಳಿಸಲಾಗಿದೆ.

ಅಂತೆಯೇ ಪುನರಾರಂಭದ ರಿಯಾಯಿತಿಯಾಗಿ ಪ್ರವೇಶ ಶುಲ್ಕವನ್ನು ₹699ಕ್ಕೆ ಇಳಿಸಲಾಗಿದೆ. ಶುಕ್ರವಾರ, ಶನಿವಾರ
ಹಾಗೂ ಭಾನುವಾರದಂದು ಮಾತ್ರ ಪಾರ್ಕ್‌ ತೆರೆದಿರುತ್ತದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅರುಣ್‌ ಚಿಟ್ಟಲಪಿಳ್ಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.