ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಾಂಧಿಯ ಅಹಿಂಸಾ ಹೋರಾಟಕ್ಕೆ ವಿಶ್ವ ಮನ್ನ,ಣೆ’

Last Updated 2 ಅಕ್ಟೋಬರ್ 2019, 14:06 IST
ಅಕ್ಷರ ಗಾತ್ರ

ಉಯ್ಯಂಬಳ್ಳಿ (ಕನಕಪುರ): ‘ಗಾಂಧೀಜಿ ನಡೆಸಿದ ಅಹಿಂಸಾ ಹೋರಾಟ ಇಂದು ವಿಶ್ವ ಮನ್ನಣೆ ಪಡೆದಿದೆ. ಇತರೆ ದೇಶಗಳ ನಾಯಕರೂ ಗಾಂಧೀಜಿಯವರ ಅಹಿಂಸಾ ಹೋರಾಟ ಮೈಗೂಡಿಸಿಕೊಂಡು ಅದರಲ್ಲಿ ಯಶಸ್ಸು ಕಂಡಿದ್ದಾರೆ’ ಎಂದು ಮಾತೃ ಹೃದಯ ಪ್ರತಿಷ್ಠಾನದ ಅಧ್ಯಕ್ಷ ಸಿ. ರವೀಂದ್ರ ಹೇಳಿದರು.

ಇಲ್ಲಿನ ಉಯ್ಯಂಬಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಜಿಲ್ಲಾ ಲೇಖಕರ ವೇದಿಕೆ ಮತ್ತು ಗಮಕ ಕಲಾ ಪರಿಷತ್ತು ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ನಡೆದ ಯುವ ಕವಿಗೋಷ್ಠಿ, ಸನ್ಮಾನ ಹಾಗೂ ಗಾಯನ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.

‘ಗಾಂಧೀಜಿಯವರ ಪ್ರಭಾವಕ್ಕೆ ಭಾರತ ಮಾತ್ರವಲ್ಲದೆ ವಿದೇಶಗಳೂ ಪ್ರಭಾವಿತವಾಗಿವೆ. ಅವರು ಹಿಂಸೆಯಿಂದ ಏನನ್ನೂ ಸಾಧಿಸಲು ಆಗುವುದಿಲ್ಲ ಎಂದು, ಅಹಿಂಸಾ ಚಳವಳಿ ನಡೆಸಿ ಸ್ವಾತಂತ್ರ್ಯ ಪಡೆಯಲು ನೆರವಾದರು’ ಎಂದರು.

‘ಯಾರಾದರೂ ಸರಳ ಜೀವನ ನಡೆಸಿದರೆ, ಹೆಚ್ಚು ಆದರ್ಶ ಮೈಗೂಡಿಸಿಕೊಂಡಿದ್ದರೆ ಅವರನ್ನು ಗಾಂಧಿ ಎಂದು ಮೂದಲಿಸುತ್ತಾರೆ. ಆದರೆ ಗಾಂಧಿ ಸರಳತೆ, ತತ್ವ ಸಿದ್ಧಾಂತಗಳೊಂದಿಗೆ ಜೀವನ ನಡೆಸಿ, ಅದರಲ್ಲಿ ಯಶ ಕಂಡವರು. ಎಲ್ಲರೂ ಅವರ ತತ್ವ, ಆದರ್ಶಗಳನ್ನು ಅನುಸರಿಸುವ ಮೂಲಕ ಗಾಂಧಿ ಜಯಂತಿಗೆ ಅರ್ಥ ಕಲ್ಪಿಸಬೇಕು’ ಎಂದರು.

ಜಿಲ್ಲಾ ಲೇಖಕರ ವೇದಿಕೆ ಅಧ್ಯಕ್ಷ ಕೂ.ಗಿ.ಗಿರಿಯಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲೆಯ ಮುಖ್ಯ ಶಿಕ್ಷಕ ಎಚ್‌.ಎನ್‌.ಮಂಜಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಚೀಲೂರು ಮುನಿರಾಜು, ರಾಜ್ಯ ಒಕ್ಕಲಿಗರ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಗಬ್ಬಾಡಿ ಕಾಡೇಗೌಡ, ಕನ್ನಡಾಂಬೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ ಅಧ್ಯಕ್ಷ ಅಸ್ಗರ್‌ಖಾನ್‌, ಜಿಲ್ಲಾ ಲೇಖಕರ ವೇದಿಕೆ ಸದಸ್ಯ ಮಿಲಿಟರಿ ರಾಮಣ್ಣ ಇದ್ದರು.

ಯುವ ಕವಿಗಳಾದ ಯು.ಕೆ.ಚಂದನ್‌, ಯು.ಎಸ್‌.ಹರ್ಷಿತ, ಡಿ.ಸಂಜನಾ, ಬಿ.ಭಾನುಪ್ರಿಯ, ಆರ್‌.ಪ್ರೀತಿ, ಯು.ಎಸ್.ಶಿವು, ಯು.ಆರ್‌.ಪುಣ್ಯಶ್ರೀ, ಕೆ.ಶಿಲ್ಪ, ಅಭಿಷೇಕ್‌ ನಾಯ್ಕ್ ಕವಿಗೋಷ್ಠಿ ನಡೆಸಿಕೊಟ್ಟರು. ಬರಗೂರು ಪುಟ್ಟರಾಜು, ಏರಂಗೆರೆ ಶಿವರಾಮ್‌, ಟಿ.ಎಂ.ರಾಮಯ್ಯ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT