ರಾಮನಗರ: `ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ಅಸ್ತಿತ್ವ ಕಂಡುಕೊಳ್ಳುತ್ತಿರುವುದನ್ನು ಸಹಿಸದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ~ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಅರಣ್ಯ ಸಚಿವ ಸಿ.ಪಿ.ಯೋಗೀಶ್ವರ್ ಆರೋಪಿಸಿದರು.

ಜಿಲ್ಲಾ ಕೇಂದ್ರದ ನೂತನ ಕಂದಾಯ ಭವನದ ಕಟ್ಟಡವನ್ನು ಪರಿಶೀಲಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.`ಕುಮಾರಸ್ವಾಮಿ ಅವರಿಗೆ ತಾವು ನಿಂತ ನೆಲ ಕುಸಿಯುತ್ತಿದೆ ಎಂಬ ಭಾವನೆ ಬಂದಿದೆ. ಹಾಗಾಗಿ ಅವರು ಈ ರೀತಿಯ ವಿಕೃತ ಮನೋಸ್ಥಿತಿಯನ್ನು ಪ್ರದರ್ಶಿಸುತ್ತಿದ್ದಾರೆ~ ಎಂದು ಅವರು ದೂರಿದರು.

`ಪ್ರತಿ ಬಾರಿಯೂ ಚುನಾವಣೆಗಳು ಬಂದ ಸಂದರ್ಭದಲ್ಲಿ ನನ್ನ ವಿರುದ್ಧ `ಮೆಗಾ ಸಿಟಿ~ ಆರೋಪ ವಹಿಸಿ ಅಪಪ್ರಚಾರದಲ್ಲಿ ತೊಡಗುವ ಮೂಲಕ ಅವರು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದರು. ನನ್ನ ವೈಯಕ್ತಿಕ ವಿಚಾರವನ್ನು ರಾಜಕೀಯಕ್ಕೆ ದಾಳವಾಗಿ ಮಾಡಿಕೊಂಡರು. ಈಗ ನನಗೆ ಅಧಿಕಾರ ಸಿಕ್ಕ ಸಂದರ್ಭದಲ್ಲಿ ಪುನಃ ಅದೇ ಆರೋಪಗಳನ್ನು ಮಾಡಿಸುತ್ತಿದ್ದಾರೆ~ ಎಂದು ಕಿಡಿಕಾರಿದರು.

`ಸುಳ್ಳನ್ನೇ ಹಲವಾರು ಬಾರಿ ಹೇಳುವ ಮೂಲಕ ಅದನ್ನು ಸತ್ಯ ಎಂದು ಸಾಬೀತು ಮಾಡಲು ಕುಮಾರಸ್ವಾಮಿ ಹೊರ ಟಿದ್ದಾರೆ. ಈ ಪ್ರಕರಣ ಕುರಿತು ಯಾವುದೇ ನ್ಯಾಯಾಂಗ ತನಿಖೆಗೂ ಸಿದ್ಧ ಇರುವುದಾಗಿ~ ಅವರು ಇದೇ ಸಂದರ್ಭದಲ್ಲಿ ಹೇಳಿದರು.

`ರಾಮನಗರದ ಹಲವೆಡೆ ಜೆಡಿಎಸ್ ಪ್ರಾಬಲ್ಯ ಕುಸಿಯುತ್ತಿದ್ದು, ಬಿಜೆಪಿ ಪ್ರಾಬಲ್ಯ ಹೆಚ್ಚುತ್ತಿದೆ. ಇದನ್ನು ಸಹಿಸದೆ ಅವರು ನನ್ನ ವಿರುದ್ಧ ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ~ ಎಂದು ಸಚಿವ ಯೋಗೀಶ್ವರ್ ದೂರಿದರು.
ಜಿಲ್ಲೆಯ ಮೂರು ನೂತನ ಕಟ್ಟಡಗಳ ಸಂಪೂರ್ಣ ಕಾಮಗಾರಿ ಮುಕ್ತಾಯಕ್ಕೆ ಇನ್ನೂ 8.50 ಕೋಟಿ ರೂಪಾಯಿ ಅಗತ್ಯವಿದ್ದು, ಅದನ್ನು ಒದಗಿಸುವಂತೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರಲ್ಲಿ ಮನವಿ ಮಾಡಲಾಗಿದೆ.

ಮುಂದಿನ ಎರಡು- ಮೂರು ತಿಂಗಳಲ್ಲಿ ಈ ಮೂರು ಕಟ್ಟಡಗಳಲ್ಲಿ ಸಂಬಂಧಿಸಿದ ಇಲಾಖೆಗಳು ಕಾರ್ಯ ನಿರ್ವಹಿಸುವಂತೆ ಕ್ರಮ ತೆಗೆದುಕೊಳ್ಳುವುದಾಗಿ ಅವರು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.