ಸಹ್ಯಾದ್ರಿ ಸಂಪತ್ತು ಸಂರಕ್ಷಣೆ ಎಲ್ಲರ ಹೊಣೆ: ಸಾಹಿತಿ ನಾ.ಡಿಸೋಜ

7
ಸಹ್ಯಾದ್ರಿ ಉತ್ಸವ ಉದ್ಘಾಟನೆ

ಸಹ್ಯಾದ್ರಿ ಸಂಪತ್ತು ಸಂರಕ್ಷಣೆ ಎಲ್ಲರ ಹೊಣೆ: ಸಾಹಿತಿ ನಾ.ಡಿಸೋಜ

Published:
Updated:
Prajavani

ಶಿವಮೊಗ್ಗ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಹ್ಯಾದ್ರಿ ಪರ್ವತ ಶ್ರೇಣಿ ವ್ಯಾಪಿಸಿದ್ದರೂ, ಅದು ಶಿವಮೊಗ್ಗ ಜಿಲ್ಲೆಗೆ ನೀಡಿರುವ ಕೊಡುಗೆ ಅಪಾರ. ಸಹ್ಯಾದ್ರಿ ಶ್ರೇಣಿ ಮೂಲಕ ನಿಸರ್ಗ ನಮಗೆ ನಿಡಿದ ಜಲಮೂಲ, ವನ್ಯ ಸಂಪತ್ತು, ಪರಿಸರ ಸಂರಕ್ಷಿಸಬೇಕಿದೆ ಎಂದು ಸಾಹಿತಿ ನಾ.ಡಿಸೋಜ ಕಿವಿಮಾತು ಹೇಳಿದರು.

ಹಳೇ ಕಾರಾಗೃಹದ ಮೈದಾನದದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಹ್ಯಾದ್ರಿ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು. 

ಮನುಷ್ಯನ ಲೆಕ್ಕಾಚಾರ, ನಿಸರ್ಗದ ಲೆಕ್ಕಾಚಾರ ಬೇರೆಬೇರೆಯೇ ಇದೆ. ‌‌ 630 ಕೋಟಿ ವರ್ಣಗಳ ಹಿಂದೆ ನಿರ್ಮಾಣವಾದ ಈ ಪರ್ವತ ಶ್ರೇಣಿಯ ಸಂಪತ್ತು, ಸಸ್ಯಪ್ರಭೇದ, ಜಲರಾಶಿ, ಪರಿಸರ. ಅದು ನೀಡಿದ ಕೊಡುಗೆ ಲೆಕ್ಕಾಚಾರ ಮಾಡಲು ಸಾಧ್ಯವಿಲ್ಲ ಎಂದರು.

ಇಂದಿನ ಯುವ ಪೀಳಿಗೆ ಕಲೆ ಸಂಸ್ಕೃತಿಯತ್ತ ಮತ್ತೆ ವಾಲುತ್ತಿದ್ದಾರೆ. ಇದು ಸಂತಸದ ವಿಚಾರ. ಇಂತಹ ಉತ್ಸಹಗಳು ಹೆಚ್ಚಾಗಬೇಕು ಎಂದು ಸಲಹೆ ನೀಡಿದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಜಿಲ್ಲೆಯ ಒಂದು ಕಲ್ಲು ‌ಎಡವಿದರೂ ಅಲ್ಲೊಂದು ‌ಇತಿಹಾಸ ಬಿಚ್ವಿಕೊಳ್ಳುತ್ತದೆ. ಜಿಲ್ಲೆಯನ್ನು ದೇಶದ ಪ್ರಮುಖ ಪ್ರವಾಸೋದ್ಯಮ ತಾಣವಾಗಿಸಲು ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕಿದೆ. ಉತ್ತಮ ರಸ್ತೆಗಳು, ಸಮರ್ಪಕ ರೈಲು, ವಿಮಾನ ಸೌಲಭ್ಯ ದೊರಕಿಸಬೇಕಿದೆ  ಎಂದರು.

ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಇಲ್ಲಿನ ನೆಲ, ಜಲದ‌ ಮಹತ್ವ ಅರ್ಥಮಾಡಿಕೊಳ್ಳಲು ಉತ್ಸವ ಸಹಕಾರಿ. 

ಕಲೆ, ಸಾಹಿತ್ಯ, ಸಮಸ್ಕೃತಿ, ರಾಜಕೀಯ, ಇತಿಹಾಸ, ಧಾರ್ಮಿಕ ಕ್ಷೇತ್ರ ಸೇರಿದಂತೆ ಎಲ್ಲ ರಂಗಗಳಲ್ಲೂ ಜಿಲ್ಲೆ ವಿಶೇಷತೆ ಹೊಂದಿದೆ. ದೇಶದ ಯಾವ ಜಿಲ್ಲೆಗೂ ಎರಡು ಜ್ಞಾನಪೀಠ ದೊರೆತಿಲ್ಲ. ಇದು ಜಿಲ್ಲೆಯ ಹೆಗ್ಗಳಿಕೆ ಎಂದು ಬಣ್ಣಿಸಿದರು.

ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್ ಮಾತನಾಡಿ, ಸಹ್ಯಾದ್ರಿ ಉತ್ಸವ ಜಿಲ್ಲೆಯ ಸಂಸ್ಕೃತಿಯ ಪ್ರತಿಬಿಂಬ ಎಂದು ಶ್ಲಾಘಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ, ಹೆಚ್ಚುವರಿ ಜಿಲ್ಲಾಧಿಕಾರಿ ಅನುರಾಧ, ಉಪ ವಿಭಾಗಾಧಿಕಾರಿ ಟಿ.ವಿ. ಪ್ರಕಾಶ್, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳಾ ವೆಂ, ನಾಯಕ್, ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಹನುಮಾನಾಯ್ಕ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !