ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹ್ಯಾದ್ರಿ ಸಂಸ್ಥೆಗೆ 20ನೇ ವರ್ಷದ ಸಂಭ್ರಮ

Published 26 ಜುಲೈ 2023, 14:00 IST
Last Updated 26 ಜುಲೈ 2023, 14:00 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಸಾವಿರಾರು ಮಂದಿ ಷೇರುದಾರರ ನಂಬಿಕೆ, ವಿಶ್ವಾಸ, ಭರವಸೆ ಉಳಿಸಿಕೊಂಡು ಸಹ್ಯಾದ್ರಿ ವಿವಿಧೋದ್ದೇಶ ಅಡಿಕೆ ಬೆಳೆಗಾರರ ಮಾರಾಟ ಸಹಕಾರ ಸಂಘ 20ನೇ ವರ್ಷದ ಸಂಭ್ರಮ ಆಚರಿಸಿಕೊಳ್ಳುತ್ತಿದೆ ಎಂದು ಅಧ್ಯಕ್ಷ ಬಸವಾನಿ ವಿಜಯದೇವ್‌ ತಿಳಿಸಿದರು.

ಎಪಿಎಂಸಿ ಪ್ರಾಂಗಣದಲ್ಲಿರುವ ಸಹ್ಯಾದ್ರಿ ಸಮುದಾಯ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ರಾಜ್ಯ ಸಹಕಾರಿ ಕ್ಷೇತ್ರದಲ್ಲಿ ಒಂದು ಸಂಸ್ಥೆ ಮನಸ್ಸು ಮಾಡಿದರೆ ಏನೆಲ್ಲಾ ಸಾಧನೆ ಮಾಡಬಹುದು ಎಂದು ಸಹ್ಯಾದ್ರಿ ಸಂಸ್ಥೆ ತೋರಿಸಿಕೊಟ್ಟಿದೆ. ಕಡಿಮೆ ಬಂಡವಾಳದಲ್ಲಿ ಆರಂಭವಾದ ಸಂಸ್ಥೆ ಈಗ ವಾರ್ಷಿಕ ₹1,219 ಕೋಟಿ ವ್ಯವಹಾರ ನಡೆಸಿದೆ. ಅಂದಾಜು ₹10 ಕೋಟಿ ಲಾಭ ಪಡೆದಿದೆ ಎಂದು ತಿಳಿಸಿದರು.

ಅಡಿಕೆ ಕೇಂದ್ರೀಕರಿಸಿ ಆರಂಭಿಸಿದ ಸಂಸ್ಥೆ ವಿಶಾಲವಾದ ದೃಷ್ಟಿಕೋನದಿಂದ ಬೆಳೆಯುತ್ತಿದೆ. ಕಡಿಮೆ ಬಡ್ಡಿದರದಲ್ಲಿ ಸಾಲ ವಿತರಿಸಿ ಉತ್ತಮ ವಸೂಲಾತಿಯನ್ನು ಹೊಂದಿದ್ದೇವೆ. ಜೊತೆಗೆ ಪೆಟ್ರೋಲ್‌ ಬಂಕ್‌, ನಂದಿನಿ ಮಿಲ್ಕ ಪಾರ್ಲರ್‌, ಎಮಿಷನ್‌ ಟೆಸ್ಟ್‌, ಸಹ್ಯಾದ್ರಿ ಚೀಟಿ ನಿಧಿ, ಸಿಯಾ ಕುಡಿಯುವ ನೀರಿನ ಘಟಕ ಲಾಭದಾಯವಾಗಿ ನಡೆಯುತ್ತಿದೆ. ಕೊರೊನಾ ಕಾಲಘಟ್ಟದಲ್ಲಿ ನಷ್ಟ ಅನುಭವಿಸಿದ್ದ ಸಾರಿಗೆ ವಿಭಾಗ ಚೇತರಿಸಿಕೊಳ್ಳುತ್ತಿದೆ ಎಂದು ತಿಳಿಸಿದರು.

ಹಲವು ವರ್ಷಗಳಿಂದ ಲೆಕ್ಕಪರಿಶೋಧನೆಯಲ್ಲಿ ‘ಎ’ ವರ್ಗ ಶ್ರೇಣಿ ಹೊಂದಿದೆ. ಸಂಘದ ಸದಸ್ಯರಿಗೆ ಶೇಕಡಾ 10 ರಷ್ಟು ಡಿವಿಡೆಂಟ್‌ ವಿತರಿಸಲು ನಿರ್ಣಯಿಸಿದ್ದೇವೆ. ಸಂಸ್ಥೆಯ ಮಾರುಕಟ್ಟೆ ಸ್ಥಿರಾಸ್ತಿ ಮೌಲ್ಯ ₹55 ಕೋಟಿ ಇದೆ. ₹117 ಕೋಟಿಗೂ ಹೆಚ್ಚಿನ ಸಾಲ ವಿತರಣೆ ಮಾಡಿದ್ದೇವೆ ಎಂದರು.

ಸೆಪ್ಟೆಂಬರ್‌ ಮೊದಲ ವಾರದಲ್ಲಿ ಸಂಸ್ಥೆಯ ಸರ್ವ ಸದಸ್ಯರ ಸಭೆಯನ್ನು ನಡೆಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ವ್ಯವಸ್ಥಾಪಕ ನಿರ್ದೇಶಕಿ ಚಂದ್ರಕಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT