ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸಿಬಿ ದಾಳಿ: ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೆಶಪ್ಪ ಮನೆಯಲ್ಲಿ 7ಕೆ.ಜಿ ಚಿನ್ನ!

ಶಿವಮೊಗ್ಗದ ಚಾಲಕ್ಯನಗರದ ಮನೆಯ ಮೇಲೆ ದಾಳಿ
Last Updated 24 ನವೆಂಬರ್ 2021, 7:56 IST
ಅಕ್ಷರ ಗಾತ್ರ

ಶಿವಮೊಗ್ಗ: ಗದಗ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಅವರ ಚಾಲುಕ್ಯ ನಗರದ ಮನೆಯ ಮೇಲೆ ಬುಧವಾರ ದಾಳಿ ನಡೆಸಿದ ಎಸಿಬಿ ಪೊಲೀಸರು ಚಿನ್ನಾಭರಣ, ನಗದು ವಶಕ್ಕೆ ಪಡೆದಿದ್ದಾರೆ.

ದಾಳಿಯ ಸಮಯದಲ್ಲಿ ಮನೆಯಲ್ಲಿ ₹ 3.5 ಕೋಟಿ ಮೌಲ್ಯದ 7 ಕೆ.ಜಿ.ಚಿನ್ನಾಭರಣ, ₹ 2 ಲಕ್ಷ ಮೌಲ್ಯದ 3 ಕೆ.ಜಿ.ಬೆಳ್ಳಿ, ₹ 15 ಲಕ್ಷ ನಗದು ದೊರೆತಿದೆ. ವಜ್ರದ ಆಭರಣಗಳ ಮೌಲ್ಯಮಾಪನ ನಡೆದಿದೆ. ಗೋಪಾಳದಲ್ಲಿನ ಮತ್ತೊಂದು ಮನೆಗೆ ಧಿಕಾರಿಗಳು ತೆರಳಿದರೂ, ಬೀಗ ಹಾಕಿದ್ದ ಕಾರಣ ಪರಿಶೀಲನೆ ನಡೆಸಲು ಸಾಧ್ಯವಾಗಲಿಲ್ಲ.

ಎಸಿಬಿ ಎಸ್‌ಪಿ ಜಯಪ್ರಕಾಶ್ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಶೀಲನಾ ಕಾರ್ಯ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT