ಮಂಗಳವಾರ, ಜನವರಿ 26, 2021
16 °C

ಅಪಘಾತ: 108 ಸಿಬ್ಬಂದಿ ನೆರವಿನಿಂದ ಯುವಕ ಪಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನವಟ್ಟಿ: ಸಮೀಪದ ಅಗಸನಹಳ್ಳಿ ಕ್ರಾಸ್ ಬಳಿಯ ಕೆರೆ ಏರಿ ಮೇಲೆ ಮಂಗಳವಾರ ಸಂಭವಿಸಿದ ಬೈಕ್ ಅಪಘಾತದಲ್ಲಿ ಸವಾರನ ಕಾಲುಗಳಿಗೆ ತೀವ್ರ ಗಾಯವಾಗಿ ರಕ್ತ ಸಾವ್ರವಾಗುತ್ತಿತ್ತು. ಮಾಹಿತಿ ಮೇರೆಗೆ ತಕ್ಷಣ ಸ್ಥಳಕ್ಕೆ ಧಾವಿಸಿದ 108 ಆಂಬುಲೆನ್ಸ್‌ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸೆ ನೀಡುವ ಮೂಲಕ ಬೈಕ್ ಸವಾರನನ್ನು ಪ್ರಾಣಪಾಯದಿಂದ ಪಾರು ಮಾಡಿದ್ದಾರೆ.

ಮೂಗುರು ಗ್ರಾಮದ ಬಸವರಾಜ (25) ಅಪಘಾತಕ್ಕೆ ಒಳಗಾದವರು. 108 ಚಾಲಕ ಪರಮೇಶಪ್ಪ ಹಾಗೂ ಶುಶ್ರೂಷಕ (ಟಾಪ್ ನರ್ಸ್) ಮಾಲತೇಶ ಬೈಕ್ ಸವಾರನ ಬಳಿ ಇದ್ದ, ಹಣ, ಗುರುತಿನ ಚೀಟಿ ಮೊದಲಾದವನ್ನು ಯುವಕನ ಪೋಷಕರಿಗೆ ಒಪ್ಪಿಸುವ ಮೂಲಕ ಮಾನವೀಯತೆ ಮೆರೆದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು