ಕೈಮರದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳ ನಿಜ. ಸಂಜೆ ವೇಳೆ ಬೆಳಕಿನ ಸಮಸ್ಯೆ ನೀಗಿಸಲು ಹೈಮಾಸ್ಟ್ ದೀಪ ಅಳವಡಿಸಲು ಪಿಡಿಒ ಅವರೊಂದಿಗೆ ಚರ್ಚಿಸಿ ವ್ಯವಸ್ಥೆ ಮಾಡುವೆ.
– ಸಂಗನಾಥ, ಅರತೊಳಲು ಗ್ರಾಮ ಪಂಚಾಯ್ತಿ ಸದಸ್ಯ
ಗ್ರಾಮ ಪಂಚಾಯ್ತಿ ಹೊಳೆಹೊನ್ನೂರು ಪೊಲೀಸರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೀಗೆ ಎಲ್ಲರಿಗೂ ಹಲವು ಬಾರಿ ಮನವಿ ಮಾಡಿ ಅಪಘಾತ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಕೋರಿದ್ದೇವೆ. ಆದರೆ ಯಾವುದೇ ಪರಿಹಾರ ದೊರೆತಿಲ್ಲ.
ಯಶವಂತ್ ಹನುಮಂತಾಪುರ, ನಿವಾಸಿ
ಕೈಮರಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸುವೆ. ಅಪಘಾತ ತಪ್ಪಿಸಲು ಅಲ್ಲಿ ಬ್ಯಾರಿಕೇಡ್ ಸ್ಪೀಡ್ ಬ್ರೇಕರ್ ಹಾಕುವ ಜೊತೆಗೆ ಹೆದ್ದಾರಿಯಲ್ಲಿನ ಕೆಲವು ಸಂಚಾರ ಮಾನದಂಡಗಳನ್ನೊ ಒಳಗೊಂಡ ವ್ಯವಸ್ಥೆ ಮಾಡಲಾಗುವುದು.
– ಪ್ರಕಾಶ್ ರಾಥೋಡ್, ಡಿವೈಎಸ್ಪಿ, ಭದ್ರಾವತಿ ಉಪವಿಭಾಗ
ಟ್ರಾಫಿಕ್ ಜಾಮ್ ನೋಟ
ಕೈಮರದಲ್ಲಿ ಬಸ್ ನಿಲ್ದಾಣವಿಲ್ಲದೇ ರಸ್ತೆಯಲ್ಲೇ ಬಸ್ ಕಾಯುತ್ತಾ ನಿಲ್ಲಬೇಕಾದ ಅನಿವಾರ್ಯತೆ