ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ: ಅಥರ್ವ ಸಂಹಿತಾ ಯಾಗ ಆರಂಭ

-
Published 10 ಜುಲೈ 2024, 16:06 IST
Last Updated 10 ಜುಲೈ 2024, 16:06 IST
ಅಕ್ಷರ ಗಾತ್ರ

ಶಿವಮೊಗ್ಗ: ವಿನೋಬನಗರ 60 ಅಡಿ ರಸ್ತೆಯ ವರಸಿದ್ಧಿ ವಿನಾಯಕ ಸ್ವಾಮಿ ಹಾಗೂ ಶನೈಶ್ಚರ ದೇವಾಲಯದಲ್ಲಿ ಬುಧವಾರದಿಂದ ಜುಲೈ 14ರವರೆಗೆ ಶ್ರೀ ಅಥರ್ವ ಸಂಹಿತಾ ಯಾಗ ಜರುಗಲಿದೆ.

ಜು. 10ರ ಬುಧವಾರದಿಂದ ಯಾಗ ಆರಂಭವಾಗಲಿದೆ. 14ರಂದು ಭಾನುವಾರ ಮಹಾ ಪೂರ್ಣಾಹುತಿಯೊಂದಿಗೆ ಯಾಗ ಸಂಪನ್ನವಾಗಲಿದೆ.

ಪ್ರತಿದಿನ ಸಂಜೆ ಭಜನಾ ಪರಿಷತ್ ಸಹಯೋಗದಲ್ಲಿ ವಿವಿಧ ಭಜನಾ ಮಂಡಳಿಗಳಿಂದ ಭಜನೆ ಜರುಗಲಿದೆ. ಸಂಜೆ 6.30ರಿಂದ 8 ಗಂಟೆವರೆಗೆ ವಿದ್ವಾನ್ ಹಂದಲಸು ವಾಸುದೇವ ಭಟ್ಟರಿಂದ ಮೋಕ್ಷದ 10 ಸೋಪಾನಗಳು ಕುರಿತು ವಿಶೇಷ ಪ್ರವಚನ ಇರುತ್ತದೆ. ಉಪನ್ಯಾಸ ನಂತರ ಅಷ್ಟಾವಧಾನ ಸೇವೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಇರುತ್ತದೆ.

ಜು. 14ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ಪೂರ್ಣಾಹುತಿ ನಂತರ ಹಂದಲಸು ವಾಸುದೇವ ಭಟ್ಟರಿಂದ ಅಥರ್ವಣ ವೇದ ಮಹತ್ವ ಕುರಿತು ಉಪನ್ಯಾಸವಿದೆ. ನಂತರ ತೀರ್ಥಪ್ರಸಾದ ವಿನಿಯೋಗ, ಮಹಾ ಅನ್ನಸಂತರ್ಪಣೆ ಜರುಗಲಿದೆ ಎಂದು  ಪ್ರಧಾನ ಅರ್ಚಕ ವಿನಾಯಕ ಬಾಯರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT