ಶುಕ್ರವಾರ, ಡಿಸೆಂಬರ್ 3, 2021
26 °C

ಭದ್ರಾವತಿ: ಅದ್ದೂರಿ ದಸರಾ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭದ್ರಾವತಿ: 50ಕ್ಕೂ ಅಧಿಕ ದೇವರ ಉತ್ಸವ ಮೂರ್ತಿಗಳ ಸಾಲು. ಇದಕ್ಕೆ ಮೆರುಗು ತಂದ ಡೊಳ್ಳು, ವೀರಗಾಸೆ, ನಾದಸ್ವರ ಹಾಗೂ  ಕಲಾತಂಡಗಳು.

ನಗರದಲ್ಲಿ ಶುಕ್ರವಾರ ನಡೆದ ದಸರಾ ಮೆರವಣಿಗೆಯಲ್ಲಿ ಕಂಡುಬಂದ ದೃಶ್ಯ ಇದು. ಶಾಸಕ ಬಿ.ಕೆ.ಸಂಗಮೇಶ್ವರ ನಂದಿಧ್ವಜಕ್ಕೆ ಪೂಜೆ ಮಾಡುವ ಮೂಲಕ ದಸರಾ ಮೆರವಣಿಗೆಗೆ ಚಾಲನೆ ನೀಡಿದರು.

ಬನ್ನಿ ಮುಡಿಯುವ ಕಾರ್ಯಕ್ರಮವನ್ನು ತಹಶೀಲ್ದಾರ್ ಪ್ರದೀಪ್ ನಡೆಸಿಕೊಟ್ಟರು. ಪೌರಾಯುಕ್ತ ಪರಮೇಶ್ವರ, ಉಪವಿಭಾಗಾಧಿಕಾರಿ ಪ್ರಕಾಶ್, ರೆವಿನ್ಯೂ ಅಧಿಕಾರಿ ರಾಜಕುಮಾರ್, ನಗರಸಭೆ ಸದಸ್ಯೆ ಶಕುಂತಲಾ, ವಿಶಾಲಾಕ್ಷಿ, ರಮಾಕಾಂತ, ರಾಮಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು