ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಕ್ಷಕರ ಮನರಂಜಿಸಿದ ಹೋರಿ ಹಬ್ಬ

ಶಿಕಾರಿಪುರದ ದೊಡ್ಡಕೇರಿಯಲ್ಲಿ ರೋಮಾಂಚನಕಾರಿ ಸ್ಪರ್ಧೆ
Last Updated 8 ನವೆಂಬರ್ 2021, 5:07 IST
ಅಕ್ಷರ ಗಾತ್ರ

ಶಿಕಾರಿಪುರ: ಸಾವಿರಾರು ಜನರ ಹರ್ಷೋದ್ಗಾರದ ಮಧ್ಯೆ ಪಟ್ಟಣದ ದೊಡ್ಡಕೇರಿಯಲ್ಲಿ ಹೋರಿ ಹಬ್ಬವು ಭಾನುವಾರ ವಿಜೃಂಭಣೆಯಿಂದ ನಡೆಯಿತು.

ಜನಪದ ಸಂಸ್ಕೃತಿಯ ಪ್ರತೀಕವಾದ ಹೋರಿ ಓಡಿಸುವ ಹಬ್ಬದಲ್ಲಿ ಪಾಲ್ಗೊಳ್ಳಲು ಹೋರಿ ಮಾಲೀಕರು ಕಾಲ್ಗೆಜ್ಜೆ, ಜೂಲಾ, ಬಲೂನ್ ಸೇರಿ ವಿವಿಧ ಅಲಂಕಾರಿಕ ವಸ್ತುಗಳಿಂದ ಹೋರಿಗಳನ್ನು ಸಿಂಗರಿಸಿದ್ದರು. ಹೋರಿ ಓಡುವ ಸಂದರ್ಭದಲ್ಲಿ ತಮ್ಮ ಹೋರಿಗಳ ಹೆಸರು ಹೊಂದಿರುವ ಟಿ- ಶರ್ಟ್‌ಗಳನ್ನು ಹಾಕಿದ್ದ ಯುವಕರು ಹರ್ಷದಿಂದ ಹೋರಿಯೊಂದಿಗೆ ಓಡುತ್ತಿದ್ದರು.

ಅಖಾಡದಲ್ಲಿ ಹೋರಿ ಬರುವ ಮುನ್ನ ತಮ್ಮ ಹೋರಿ ಹೆಸರಿನ ಧ್ವಜಗಳನ್ನು ಹಿಡಿದು ಯುವಕರು ಸಾಗುತ್ತಿದ್ದರು. ಹೋರಿ ಆಗಮಿಸುವ ಸಂದರ್ಭದಲ್ಲಿ ಹೋರಿ ಅಭಿಮಾನಿಗಳು ಪುಷ್ಪವನ್ನು ಹೋರಿಗಳ ಮೇಲೆ ಹಾಕುವ ಮೂಲಕ ಸ್ವಾಗತ ಕೋರುತ್ತಿದ್ದರು.

ಹೋರಿ ಸಾಗುವ ಸಂದರ್ಭದಲ್ಲಿ ಹೋರಿ ಮಾಲೀಕರು ‘ಹಾ‌ಕೋ ಕೈಯಾ ಮುಟ್ಟೋ ಮೈಯಾ’ ಎಂದು ಹರ್ಷೋದ್ಗಾರದಿಂದ ಕೂಗುತ್ತಿದ್ದರು. ಸಾಹಸಿ ಯುವಕರು ವೇಗವಾಗಿ ಓಡುತ್ತಿದ್ದ ಹೋರಿಗಳನ್ನು ಹಿಡಿದು ಹೋರಿಗಳ ಮೇಲೆ ಹಾಕಿದ್ದ ಕೊಬ್ಬರಿ ಮಾಲೆಯನ್ನು ಕೀಳುತ್ತಿದ್ದ ದೃಶ್ಯ ರೋಮಾಂಚನಕಾರಿಯಾಗಿತ್ತು.

ಹೋರಿ ಹಬ್ಬದಲ್ಲಿ ಶಿಕಾರಿಪುರ ಪಟ್ಟಣ ಸೇರಿ ತಾಲ್ಲೂಕಿನ ವಿವಿಧ ಗ್ರಾಮಗಳು ಹಾಗೂ ಜಿಲ್ಲೆಯ ವಿವಿಧ ಗ್ರಾಮಗಳ ನೂರಾರು ಹೋರಿಗಳು ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿದವು. ಹೋರಿ ಓಡುವ ಸಂದರ್ಭದಲ್ಲಿ ಹೋರಿಯಿಂದ ಅಂತರ ಕಾಯ್ದುಕೊಳ್ಳುವಂತೆ ಪ್ರೇಕ್ಷಕರಿಗೆ ಆಯೋಜಕರು ಧ್ವನಿವರ್ಧಕ ಮೂಲಕ ಸೂಚನೆ ನೀಡುತ್ತಿದ್ದರು.

ಗಮನ ಸೆಳೆದ ಹೋರಿಗಳ ಹೆಸರು: ಹೋರಿಗಳ ಮಾಲೀಕರು ತಮ್ಮ ಹೋರಿಗಳಿಗೆ ತಮಗಿಷ್ಟವಾದ ದೇವರು, ಚಿತ್ರನಟ ಸೇರಿ ವಿವಿಧ ಹೆಸರುಗಳನ್ನು ಇಟ್ಟಿದ್ದರು. ಯುವ ಕೇಸರಿ, ಗಾಂಧಿನಗರ ಮಹಾರಾಜ, ಇಂಡಿಯನ್ ಎಕ್ಸ್‌ಪ್ರೆಸ್‌, ಚಾಮುಂಡಿ ಎಕ್ಸ್‌ಪ್ರೆಸ್‌, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಅಘೋರ, ಆರ್ಮುಗ, ಶಿವಮೊಗ್ಗ ಡಾನ್, ದೊಡ್ಡಕೇರಿ ಡಾನ್, ಬೆಂಗಳೂರು ಡಾನ್, ಮಾಣಿಕ್ ಬಾಷಾ, ಕನಕನ ಸರ್ಕಾರ್, ಕೊಬ್ರಿಕಿಂಗ್, ಈಸೂರು ದಂಗೆ ಸವಿನೆನಪಿಗಾಗಿ ರಾಯಣ್ಣ, ದೊರೆ, ಗುಡ್ಡದ ಒಡೆಯ, ದೂಪದಹಳ್ಳಿ ರಾಜರತ್ನ, ಗಿಡ್ಡೇಶ್ವರ, ಶಿವನಂದಿ, ಆರ್ಮುಗ, ಅಸುರ, ವಿಚಿತ್ರ, ಸಂಕ್ರೇರ್ ಮೈಲಾರಿ, ಆರ್ಮಿಹುಲಿ, ವಜ್ರಮುನಿ, ಲಕ್ಷಾಧಿಪತಿ, ಕಂಸ, ದೊಡ್ಡಕೇರಿ ಡಾನ್, ದೊರೆ, ಸಿಡಿಲು, ಕುಮದ್ವತಿ ಹುಲಿ, ಭಸ್ಮಾಸುರ, ಹೈಸ್ಪೀಡ್ ಕ್ರಾಂತಿವೀರ, ಅಂಡರ್ ವರ್ಲ್ಡ್, ಗರುಡ, ತಿಮ್ಲಾಪುರ ರೌಡಿಬೇಬಿ, ಚಂದ್ರಗುತ್ಯಮ್ಮ, ಅಶ್ವಮೇಧ, ಹಳ್ಳೂರುಹುಲಿ, ತಿಮ್ಲಾಪುರ ಸರ್ಕಾರ್, ಸಿಕ್ಸ್ ಪ್ಯಾಕ್ ಶಿವ, ಗಂಧದಗುಡಿ, ಶಿರಾಳಕೊಪ್ಪ ಬಿಗ್ ಬಾಸ್, ತಿಮ್ಲಾಪುರ ಸೆವೆನ್ ಸ್ಟಾರ್, ಸಲಗ, ಆಕ್ಷ್ಯನ್ ಕ್ರಾಂತಿವೀರ, ಸೃಷ್ಟಿಕರ್ತ, ಕಡಲಮುತ್ತು ರಾಷ್ಟ್ರಪತಿ, ಬಂದ್ಯಾನೋ ನೋಡು ಗೂಳಿ, ಮಹಾನಾಯಕ, ಬೆಂಕಿ ಬಿರುಗಾಳಿ, ಭಾರತ ರತ್ನ, ರಣಗಲ್, ಹಿಟ್ಲರ್, ರಾವಣ, ಸೊಪ್ಪಿನಕೇರಿ ಸಿಂಹ, ತಮಡಿಹಳ್ಳಿ ಕಿಂಗ್, ಅಪ್ಪು, ಕಪ್ಪನಹಳ್ಳಿ ಭಗತ್ ಸಿಂಗ್, ತಿಮ್ಲಾಪುರ ಬಿಗಿಲ್, ಓಭ್ರಮೆ, ಕೆಇಬಿ ಕಿಂಗ್, ಸಫಾರಿ ಕಿಂಗ್, ಶನಿ, ಕೋಡಿಹಳ್ಳಿ ಜೂನಿಯರ್ ಗರುಡ, ಶಿಕಾರಿಪುರ ಕಳಸ, ಚಕ್ರವರ್ತಿ, ದಂತಚೋರ ವೀರಪ್ಪನ್, ಆರ್ಯಭಟ, ಕಣಿಯದ ಸರ್ದಾರ್, ದುರ್ಯೋಧನ, ಭಗತ್ ಸಿಂಗ್, ಶಿಕಾರಿಪುರ ಗಂಧದಗುಡಿ, ಚುಂಚಿನಕೊಪ್ಪ ಕನ್ನಡಿಗ, ಬೆಂಗಳೂರು ಡಾನ್, ಕುಮದ್ವತಿ ಹುಲಿ, ಸಾರ್ವಭೌಮ, ರಾಜಕುಮಾರ, ಭಾರತರತ್ನ, ಬೋಗಿ ಬ್ರದರ್, ಶಿಕಾರಿಪುರ ಮಾರಿ,ಏಳುಕೋಟಿ, ಮೇದೂರು ಕಿಂಗ್, ಶಿವರತ್ನ, ಗಂಗೊಳ್ಳಿ ಗರುಡ, ತಿರುಪತಿ ಎಕ್ಸ್‌ಪ್ರೆಸ್‌, ಮಾಣಿಕ್ಯ, ಗಾಂಧಿನಗರ ಮಹಾರಾಜ, ಸಲಗ, ಕಡಲಮುತ್ತು, ಪೇಟೆರ್ ಹುಲಿ, ಕರ್ಣ, ಕಪ್ಪನಹಳ್ಳಿ ವೈಭವ್, ಚಿಟ್ಟೂರು ಹುಲಿ, ಭಗತ್ ಸಿಂಗ್, ರಾಯಗಡ ಸಿಂಹ, ಭೈರವ, ಯುವ ಕೇಸರಿ, ಹುಲ್ಮಾರ್ ಹುಲಿ, ಕ್ರಾಂತಿವೀರ ಕಿಂಗ್, ಆರ್‌ಎಕ್ಸ್ 100, ಹೊನ್ನಾಳಿ ರಾಜಕುಮಾರ, ಜಮದಗ್ನಿ, ಚನ್ನಳ್ಳಿ ಯುವರತ್ನ, ಆಯನೂರುಕೋಟೆ ಸುಲ್ತಾನ್, ನಾನೇ ಸ್ಟಾರ್, ಶಿವಮೊಗ್ಗ ಸಿಂಹ, ಶಿವಮೊಗ್ಗ ಬೇಟೆಗಾರ, ಆಕ್ಷ್ಯನ್ ಸ್ಟಾರ್ ಅಭಿಮನ್ಯು, ಬ್ರಹ್ಮ, ಭ್ರಾಂತೇಶ್, ನ್ಯೂ ಸನ್ನಿಲಿಯೋನ್, ಶಕೀಲ, ಗೌರಿ, ರೌಡಿಬೇಬಿ, ಶ್ರೀದುರ್ಗ, ಹಾದಿಮನಿ, ಪವರ್ ಸ್ಟಾರ್, ವೀರಭದ್ರ, ಕಾನುಗುಡಿ ಕಿಂಗ್, ಶಿವಗಿರಿ, ಕ್ರಾಂತಿವೀರ ಡಾನ್, ಚಕ್ರವರ್ತಿ, ತಿರುಪತಿ ಎಕ್ಸ್‌ಪ್ರೆಸ್‌, ಯುವರತ್ನ, ಕಬಾಡಿ, ಬಳ್ಳಿಗಾವಿ ವಿಷ್ಣುವರ್ಧನ, ಹಳಿಯೂರು ಹುಲಿ, ಶ್ರೀನಿಧಿ ಎಕ್ಸ್‌ಪ್ರೆಸ್‌, ಹಾಲಿವುಡ್ ಕಿಂಗ್ ಸೇರಿ ವಿವಿಧ ಹೆಸರಿನ ಹೋರಿಗಳು ಹೋರಿ ಹಬ್ಬದಲ್ಲಿ ಪಾಲ್ಗೊಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT