ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25ಕ್ಕೆ ‘ಚೈತನ್ಯ ಸೌಧ’ ಕಟ್ಟಡ ಉದ್ಘಾಟನೆ

Last Updated 23 ಜನವರಿ 2020, 14:31 IST
ಅಕ್ಷರ ಗಾತ್ರ

ಶಿವಮೊಗ್ಗ: ವಿದ್ಯಾನಗರ ಕಂಟ್ರಿಕ್ಲಬ್‌ನಲ್ಲಿ ಜ.25ರಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿವಮೊಗ್ಗ ಜಿಲ್ಲಾ ಕೇಂದ್ರ ಕಚೇರಿ ಕಟ್ಟಡ ‘ಚೈತನ್ಯ ಸೌಧ’ ಉದ್ಘಾಟನೆ, ಯಾಂತ್ರೀಕೃತ ಭತ್ತ ಬೇಸಾಯ‘ಯಂತ್ರಶ್ರೀ’ ಯೋಜನೆಗೆಚಾಲನೆ ನೀಡಲಾಗುತ್ತಿದೆ.

ಜಿಲ್ಲೆಯ 7 ತಾಲ್ಲೂಕುಗಳಲ್ಲಿ 19,597 ಸ್ವ-ಸಹಾಯ ಸಂಘಗಳು ಕೆಲಸ ಮಾಡುತ್ತಿವೆ. 1,70,057 ಕುಟುಂಬಗಳಿಗೆ ಯೋಜನೆಯ ನೆರವು ದೊರೆಯುತ್ತಿದೆ. ಮಾನವ ಸಂಪನ್ಮೂಲ ಆಧಾರಿತ ಈ ಕಾರ್ಯಕ್ರಮಗಳಿಗೆ ‘ಚೈತನ್ಯ ಸೌಧ’ಬಳಕೆ ಮಾಡಲಾಗುವುದು.ಕಡಿಮೆ ನೀರು ಉಪಯೋಗಿಸಿ, ಶ್ರೀಪದ್ಧತಿ ಬೇಸಾಯ ಮಾಡಿದರೆ ಉತ್ಪಾದನಾ ವೆಚ್ಚ ತಗ್ಗಿಸಬಹುದು. ಭತ್ತ ಬೇಸಾಯ ಲಾಭದಾಯಕವಾಗಿಸಲು ಯಂತ್ರಶ್ರೀ ಕಾರ್ಯಕ್ರಮ ಜಾರಿಗೆತರಲಾಗುತ್ತಿದೆ. ಜಿಲ್ಲೆಯಲ್ಲಿ 5ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಯಾಂತ್ರೀಕೃತ ಭತ್ತ ಬೇಸಾಯ ಹಮ್ಮಿಕೊಳ್ಳುವ ಗುರಿ ಹೊಂದಲಾಗಿದೆ. ಭತ್ತ ಬೆಳೆಯುವ ರಾಜ್ಯದ 14 ಜಿಲ್ಲೆಗಳಲ್ಲಿ ಈ ಕಾರ್ಯಕ್ರಮವನ್ನು ಜಾರಿಗೆ ತರಲಾಗುವುದು ಎಂದುದೆ ಎಂದು ಯೋಜನೆಯ ಪ್ರಾದೇಶಿಕ ನಿರ್ದೇಶಕ ವಸಂತ್ ಸಾಲ್ಯಾನ್ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅಂದುಬೆಳಿಗ್ಗೆ 10.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ನೂತನ ಕಟ್ಟಡ ಉದ್ಘಾಟಿಸುವರು.ಸಂಸದ ಬಿ.ವೈ. ರಾಘವೇಂದ್ರ ಸ್ವ ಉದ್ಯೋಗ ಯೋಜನೆಯ ನೆರವು ಬಿಡುಗಡೆ ಮಾಡುವರು. ಮೇಯರ್ ಲತಾ ಗಣೇಶ್‌ ಅಂಗವಿಕಲರಿಗೆ ಸಲಕರಣೆ ವಿತರಿಸವರು.ಜಿಲ್ಲಾ ಪಂಚಾಯಿತಿಉಪಾಧ್ಯಕ್ಷೆ ವೇದಾ ವಿಜಯಕುಮಾರ್ ಭತ್ತ ಅಭಿಯಾನ ಕಾರ್ಯಾಗಾರ ಉದ್ಘಾಟಿಸುವರು ಎಂದರು.

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಪಾಲಿಕೆಯ ಆಯುಕ್ತ ಚಿದಾನಂದ್ ಎಸ್. ವಟಾರೆ, ಯೋಜನೆ ನಿರ್ದೇಶಕಡಾ.ಎಲ್.ಎಚ್. ಮಂಜುನಾಥ್ ಉಪಸ್ಥಿತರಿರುವರು.ಕಾರ್ಯಾಗಾರದಲ್ಲಿ 1500ಕ್ಕೂ ಹೆಚ್ಚು ರೈತರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮನೋಜ್ ಮಿನೇಜಸ್, ಗೀತಾ, ಬಾಲಕೃಷ್ಣ ಹಿರಿಂಜ, ಸುಧೀರ್ ಜೈನ್, ಮಾಧವಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT