ಶನಿವಾರ, ಜೂಲೈ 4, 2020
25 °C
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 35ಕ್ಕೆ ಏರಿಕೆ, ಗುಣಮುಖ 7

ಭದ್ರಾವತಿ ಮಹಿಳೆಗೆ ಕೋರೊನಾ ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ/ಭದ್ರಾವತಿ: ದೆಹಲಿಯಿಂದ ಬಂದ ಭದ್ರಾವತಿಯ 35 ವರ್ಷದ (p-2583)ಮಹಿಳೆಗೆ ಕೋರೊನಾ ಸೋಂಕು ಇರುವುದು ಶುಕ್ರವಾರ ದೃಢಪಟ್ಟಿದೆ. 

ಮೇ 24ರಂದು ಬಂದಿದ್ದ ಅವರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಸೋಂಕು ತಗುಲಿರುವುದು ದೃಢಪಟ್ಟ ಬಳಿಕ ಮಹಿಳೆ, ಅವರ  ತಾಯಿ, ಪತಿ ಹಾಗೂ ಬಾಲಕನನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮಹಿಳೆ ದೆಹಲಿಯಲ್ಲಿ ಉದ್ಯೋಗದಲ್ಲಿದ್ದರು. ಅಲ್ಲಿಯೇ ಪತೊಯ ಜತೆ ವಾಸಿಸುತ್ತಿದ್ದರು. ಅವರ ತಾಯಿ ಇಲ್ಲಿನ ಬೊಮ್ಮನಕಟ್ಟೆ ವಾಸಿ. ಅವರೂ ಮಾರ್ಚ್‌ನಲ್ಲಿ ಲಾಕ್‌ಡೌನ್‌ಗೂ ಮೊದಲು ದೆಹಲಿಗೆ ತೆರಳಿದ್ದರು. ಮೇ 22ರಂದು ದೆಹಲಿಯಿಂದ ಮಹಿಳೆ ಜತೆಗೆ ತಾಯಿ, ಗಂಡ ಹಾಗೂ ಸಂಬಂಧಿಯ ಹುಡುಗ ಭದ್ರಾವತಿಗೆ ಬಂದಿದ್ದರು. ಆರೋಗ್ಯ ಇಲಾಖೆ ಸಿಬ್ಬಂದಿ ತಪಾಸಣೆ ನಡೆಸಿ, ಖಾಸಗಿ ವಸತಿ ಗೃಹದಲ್ಲಿ ಕ್ವಾರಂಟೈನ್ ಮಾಡಿದ್ದರು. ನಂತರ ಬೊಮ್ಮನಕಟ್ಟೆಯ ಅವರ ಮನೆಗೆ ಕಳುಹಿಸಿದ್ದರು.

ಇದ್ದದ್ದು ಒಂದೇ ಗಂಟೆ: ವಸತಿಗೃಹದ ಕ್ವಾರಂಟೈನ್ ಮುಗಿಸಿ, ಮನೆಗೆ ತೆರಳಿದ್ದ ಒಂದೇ ಗಂಟೆಯಲ್ಲಿ ಪುನಃ ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ಸೃಷ್ಟಿಯಾಗಿದೆ. ಇದು ಬೊಮ್ಮನಕಟ್ಟೆ ಸುತ್ತಲಿನ ನಾಗರಿಕರಲ್ಲಿ ಆತಂಕ ಹೆಚ್ಚು ಮಾಡಿದೆ. ವಸತಿ ಗೃಹದ ಸಿಬ್ಬಂದಿಯನ್ನೂ ಕ್ವಾರಂಟೈನ್ ಮಾಡಲಾಗಿದೆ. ವಸತಿ ಗೃಹ ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದೆ.

ಮನೆಯಲ್ಲಿದ್ದ ಸಮಯದಲ್ಲಿ ಮಹಿಳೆ ತಂದೆಗೆ ಮನೆಬಿಟ್ಟು ಹೊರಗೆ ಇರುವಂತೆ ಸೂಚಿಸಲಾಗಿತ್ತು. ಹಾಗಾಗಿ, ಅವರನ್ನು ಆಸ್ಪತ್ರೆಗೆ ದಾಖಲಿಸಿಲ್ಲ. ಮಹಿಳೆಯನ್ನು ಜತೆ ಕರೆ ತಂದ ಸಿಬ್ಬಂದಿ ಹಾಗೂ ಅವರ ಜತೆ ಓಡಾಡಿದ್ದ ಇತರೆ ಸಿಬ್ಬಂದಿಯನ್ನೂ ಹೋಂ ಕ್ವಾರಂಟೈನ್ ಮಾಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು