ಬುಧವಾರ, ಆಗಸ್ಟ್ 4, 2021
28 °C
6ಕ್ಕೇರಿದ ಮೃತರ ಸಂಖ್ಯೆ, ಒಂದೇ ದಿನ 17 ಜನರಿಗೆ ಕೊರೊನಾ ವೈರಸ್‌ ದೃಢ

ಶಿವಮೊಗ್ಗ: ತಿಥಿಗೆ ಬಂದಿದ್ದ ಸಹೋದರ ಕೊರೊನಾ ಸೋಂಕಿನಿಂದ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಕಾಂಗ್ರೆಸ್ ಮುಖಂಡ ಉಮೇಶ್ ವರ್ಮಾ ಅವರ ಪುಣ್ಯತಿಥಿಗೆ ಬೆಂಗಳೂರಿನಿಂದ ಬಂದಿದ್ದ 70 ವರ್ಷದ ಅವರ ಸಹೋದರ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ ಸೋಂಕಿಗೆ ಮೃತರಾದವರ ಸಂಖ್ಯೆ 6ಕ್ಕೇರಿದೆ.

ತೀವ್ರ ಉಸಿರಾಟದ ತೂಂದರೆ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಜೂನ್ 4ರಂದು ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಬುಧವಾರ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ. ಅವರಿಗೆ ಸೋಂಕು ಇರುವುದನ್ನು ಜಿಲ್ಲಾಡಳಿತ ಖಚಿತಪಡಿಸಿದೆ.

ಜಿಲ್ಲೆಯಲ್ಲಿ ಬುಧವಾರ 17 ಮಂದಿಗೆ ಸೋಂಕು ತಗುಲಿದೆ. ಒಟ್ಟು ಸೋಂಕಿತರ ಸಂಖ್ಯೆ 335ಕ್ಕೆ ಏರಿಕೆಯಾಗಿದೆ. ಬುಧವಾರ ನಾಲ್ವರು ಸೇರಿದಂತೆ ಒಟ್ಟು 141 ಜನರು ಗುಣಮುಖರಾಗಿದ್ದಾರೆ. 190 ಜನರು ಕೋವಿಡ್ ಮೆಗ್ಗಾನ್‌‌ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಥಮ ಸಂಪರ್ಕದಿಂದ 9 ಜನರಿಗೆ ಸೋಂಕು

ಜಿಲ್ಲೆಯಲ್ಲಿ ಬುಧವಾರ ವಿವಿಧ ವ್ಯಕ್ತಿಗಳ ಪ್ರಥಮ ಸಂಪರ್ಕದಿಂದ 9 ಜನರಿಗೆ ಸೋಂಕು ತಗುಲಿದೆ. 

ಪಿ–10828 ರೋಗಿಯ ಸಂಪರ್ಕದಿಂದ 1 ವರ್ಷದ ಬಾಲಕಿ (ಪಿ–26953), ಪಿ–19765 ರೋಗಿಯ ಸಂಪರ್ಕದಿಂದ 24 ವರ್ಷದ ಮಹಿಳೆ (ಪಿ–26956), ಪಿ–19764 ರೋಗಿಯ 80 ವರ್ಷದ ವೃದ್ಧೆ (ಪಿ–26957), ಪಿ14387 ರೋಗಿಯ ಸಂಪರ್ಕದಿಂದ 24 ವರ್ಷದ ಪುರುಷ (ಪಿ–26960), 39 ವರ್ಷದ ಪುರುಷ (ಪಿ–26961), 40 ವರ್ಷದ ಪುರುಷ (ಪಿ–26962), ಪಿ–14391 ರೋಗಿಯ ಸಂಪರ್ಕದಿಂದ 57 ವರ್ಷದ ಪುರುಷ (ಪಿ–26963), 50 ವರ್ಷದ ಮಹಿಳೆ (ಪಿ–26964), ಪಿ–25770 ರೋಗಿಯ ಸಂಪರ್ಕದಿಂದ 55 ವರ್ಷದ ಮಹಿಳೆಗೆ (ಪಿ–26966) ಸೋಂಕು ಇರುವುದು ದೃಢಪಟ್ಟಿದೆ.

ನಾಲ್ವರಿಗೆ ತೀವ್ರ ಉಸಿರಾಟದ ತೊಂದರೆ

ತೀವ್ರ ಉಸಿರಾಟದ ತೊಂದರೆಯಿಂದ ನರಳುತ್ತಿದ್ದ ನಾಲ್ವರಲ್ಲಿ ಸೋಂಕು ಕಂಡುಬಂದಿದೆ. 72 ವರ್ಷದ ವೃದ್ಧ (ಪಿ–26954),  63 ವರ್ಷದ ಪುರುಷ (ಪಿ–26955), 40 ವರ್ಷದ ಮಹಿಳೆ (ಪಿ–26958), 23 ವರ್ಷದ ಯುವಕ (ಪಿ–26959) ಉಸಿರಾಟದ ತೊಂದರೆಯಿಂದ ಚಿಕಿತ್ಸೆಗೆ ದಾಖಲಾಗಿದ್ದರು. ಅವರ ಗಂಟಲು ದ್ರವ ಪರೀಕ್ಷೆಯಲ್ಲಿ ಸೋಂಕು ಇರುವುದು ಖಚಿತವಾಗಿದೆ.

ಬೆಂಗಳೂರಿನಿಂದ ಬಂದ ಮೂವರಿಗೆ ವೈರಸ್‌

ಬೆಂಗಳೂರಿನಿಂದ ಜಿಲ್ಲೆಗೆ ಬಂದಿದ್ದ ಇಬ್ಬರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. 48 ವರ್ಷದ ಪುರುಷ (ಪಿ–26965) ಹಾಗೂ 32 ವರ್ಷದ ಮಹಿಳೆ (ಪಿ–26967), 55 ವರ್ಷದ ಪುರುಷನ (ಪಿ–26968) ಪರೀಕ್ಷೆಗೆ ಇಳಪಡಿಸಲಾಗಿತ್ತು. 35 ವರ್ಷದ (ಪಿ–26969) ಪುರುಷನಿಗೆ ಸೋಂಕು ತಗುಲಿದ ಮೂಲ ಪತ್ತೆಯಾಗಿಲ್ಲ.

ನಗರ, ತಾಲ್ಲೂಕುವಾರು ವಿವರ

ಸೋಂಕಿತರಲ್ಲಿ ಶಿವಮೊಗ್ಗ ನಗರದ 7, ಶಿಕಾರಿಪುರ 3, ಸೊರಬ 5, ಸಾಗರ 1 ಹಾಗೂ ಚಿಕ್ಕಮಗಳೂರಿನಿಂದ ಚಿಕಿತ್ಸೆಗೆ ಬಂದಿದ್ದ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಶಿವಮೊಗ್ಗ ನಗರದ ಗಾಂಧಿನಗರ, ಅಶೋಕ ನಗರ, ಅಜಾದ್‌ ನಗರದ ತಲಾ ಇಬ್ಬರಿಗೆ, ವಿವೇಕಾನಂದ ಬಡಾವಣೆಯ ಇಬ್ಬರಿಗೆ ಸೋಂಕು ತಗುಲಿದೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು