ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್‌ಗೆ ಜಿಲ್ಲೆಯ ಮತ್ತಿಬ್ಬರ ಸಾವು

ಭದ್ರಾವತಿಯ 42 ವರ್ಷದ ಪುರುಷ, ಶಿವಮೊಗ್ಗ ಗಾಂಧಿ ಬಜಾರ್‌ನ ವೃದ್ಧೆ
Last Updated 11 ಜುಲೈ 2020, 16:15 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಲ್ಲಿ ಶನಿವಾರ ಮತ್ತಿಬ್ಬರು ಕೋವಿಡ್‌ ರೋಗಿಗಳು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.

ಭದ್ರಾವತಿಯ 42 ವರ್ಷದ ವ್ಯಕ್ತಿ.ಜುಲೈ9ರಂದು ಬೆಂಗಳೂರಿನಿಂದ ಬಂದಿದ್ದರು.ಕೋವಿಡ್‌ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಅವರನ್ನು ಮೆಗ್ಗಾನ್‌ ಕೋವಿಡ್‌ ಆರೈಕೆ ಕೇಂದ್ರಕ್ಕೆ ದಾಖಲಿಸಲಾಗಿತ್ತು.ಅವರ ಅಂತ್ಯ ಸಂಸ್ಕಾರವನ್ನು ಶನಿವಾರ ರೋಟರಿ ಚಿತಾಗಾರದಲ್ಲಿ ನೆರವೇರಿಸಲಾಯಿತು.

ಗಾಂಧಿಬಜಾರ್‌ ಧರ್ಮರಾಯನದೇವಸ್ಥಾನಬೀದಿಯ90 ವರ್ಷದ ವೃದ್ಧೆ ಕೊರೊನಾ ವೈರಸ್‌ನಿಂದ ಮೃತಪಟ್ಟಿದ್ದಾರೆ.

ರೋಗಿ ಸಂಖ್ಯೆ ಪಿ–36191ರಿಂದಪಿ–36216ರವರೆಗಿನಜಿಲ್ಲೆಯ 26 ಜನರಿಗೆ ಶನಿವಾರ ಸೋಂಕು ಇರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 404ಕ್ಕೇರಿದೆ. ಇದುವರೆಗೂ 169 ಜನರು ಗುಣಮುಖರಾಗಿದ್ದು, 228 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಬ್ಬರಿಂದ ಐವರಿಗೆ ಸೋಂಕು:ಪಿ–21633 ರೋಗಿಯ ಸಂಪರ್ಕದಿಂದ ಒಬ್ಬ ಬಾಲಕ, ಬಾಲಕಿ ಸೇರಿ ಐವರಿಗೆ ಸೋಂಕು ತಗುಲಿದೆ. 7 ವರ್ಷದ ಬಾಲಕ,13 ವರ್ಷದ ಬಾಲಕಿ,65 ವರ್ಷದ ಮಹಿಳೆ,52,45 ವರ್ಷದ ಪುರುಷರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.ಪಿ–29106ರೋಗಿಯ ಸಂಪರ್ಕದಿಂದ15 ವರ್ಷದ ಬಾಲಕಿಗೂ ಸೋಂಕು ತಗುಲಿದೆ.

ಬೆಂಗಳೂರಿನಿಂದ ಜಿಲ್ಲೆಗೆ ಬಂದಿರುವ34 ವರ್ಷದ ಮಹಿಳೆ,55 ವರ್ಷದ ಪುರುಷರಲ್ಲೂ ವೈರಸ್‌ ಪತ್ತೆಯಾಗಿದೆ.

ಆರೋಗ್ಯ ಸಮಸ್ಯೆಯ ಕಾರಣ ಚಕಿತ್ಸೆಗೆ ಬಂದಿದ್ದ 7 ವರ್ಷದ ಬಾಲಕ, 22,25,28 ವರ್ಷದ ಯುವಕರು,65,52 ವರ್ಷದ ಇಬ್ಬರು ಮಹಿಳೆಯರು, 23,21 ಹಾಗೂ 24 ವರ್ಷದ ಯುವತಿಯರು,35, 48,46,45,52 ವರ್ಷದ ಪುರುಷರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದಾಗ ಸೋಂಕು ಇರುವುದು ಖಚಿತವಾಗಿದೆ.ತೀವ್ರ ಉಸಿರಾಟದ ತೊಂದರೆ ಇರುವ 36,43 ಹಾಗೂ 59 ವರ್ಷದ ಪುರುಷರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.

ನಾಲ್ವರು ಪೊಲೀಸರು ಕ್ವಾರಂಟೈನ್‌:ಪ್ರಕರಣವೊಂದರ ಆರೋಪಿ ವಿಚಾರಣೆನಡೆಸಿದ್ದ, ತಪ್ಪಿತಸ್ಥರನ್ನು ಬಂಧಿಸಿ, ಕಾರಾಗೃಹಕ್ಕೆ ಬಿಟ್ಟು ಬಂದಿದ್ದ ದೊಡ್ಡಪೇಟೆಯ ನಾಲ್ವರು ಪೊಲೀಸರನ್ನು ಶನಿವಾರ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT