ಭಾನುವಾರ, ಆಗಸ್ಟ್ 1, 2021
23 °C

ಶಿವಮೊಗ್ಗ | ಸೋಂಕಿತರ ಸಂಖ್ಯೆ ಹೆಚ್ಚಳ: ಜಿಲ್ಲೆಯ ಎಲ್ಲೆಡೆ ನಿಷೇಧಾಜ್ಞೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಪರಿಣಾಮ ಜುಲೈ 4ರಿಂದ ಪ್ರತಿ ದಿನ ಸಂಜೆ 6ರಿಂದ ಬೆಳಿಗ್ಗೆ 5ರವರೆಗೆ ಜಿಲ್ಲೆಯ ಎಲ್ಲೆಡೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪ್ರತಿ ಭಾನುವಾರ ಇಡೀ ದಿನ ಲಾಕ್‌ಡೌನ್ ಇರುತ್ತದೆ.

ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಸೋಂಕಿತರ ಸಂಖ್ಯೆ ನಿರಂತರ ಏರಿಕೆಯಾಗುತ್ತಿವೆ. ನಿಯಂತ್ರಣಕ್ಕೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮದ ಹೊರತಗಿಯೂ ನಗರ, ಗ್ರಾಮೀಣ ಪ್ರದೇಶಗಳಿಗೂ ಸೋಂಕು ವ್ಯಾಪಿಸುತ್ತಿದೆ. ಸಮುದಾಯಕ್ಕೆ ಕೊರೊನಾ ಸೋಂಕು ಹರಡದಂತೆ ನೋಡಿಕೊಳ್ಳಲು ಬೆಳೆಗ್ಗೆ 10ರಿಂದ ಸಂಜೆ 6ವರೆಗೆ ವ್ಯಾವಾರ ವಹಿವಾಟಿಗೆ ಅನುಮತಿ ನೀಡಿ, 6ರ ನಂತರ ನಿಷೇಧಾಜ್ಞೆ ಮುಂದುವರಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಪ್ರತಿ ದಿನ ಸಂಜೆ 6ರ ನಂತರವೂ ಹಾಲು, ಔಷಧ ಮತ್ತಿತರ ಅಗತ್ಯ ಸೇವೆಗಳು ಇರುತ್ತವೆ. ಈ ಅವಧಿಯಲ್ಲಿ ಯಾರೂ ಅನಗತ್ಯವಾಗಿ ರಸ್ತೆಗೆ ಇಳಿಯಬಾರದು,  ಇತರೆ ಸಮಯದಲ್ಲೂ ಮಾಸ್ಕ್‌ ಬಳಕೆ ಕಡ್ಡಾಯ. ಮಾಸ್ಕ್ ಇಲ್ಲದೆ ಓಡಾಡಿದರೆ ದಂಡ ಬೀಳಲಿದೆ. ಬಲವಂತವಾಗಿ ಲಾಕ್‌ಡೌನ್ ಮಾಡುವುದಿಲ್ಲ. ಆದರೆ, ಕೊರೊನಾ ನಿಯಂತ್ರಣಕ್ಕೆ  ಕ್ರಮ ಅನಿವಾರ್ಯ ಎಂದು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮಾಹಿತಿ ನೀಡಿದರು.

ಒಂದೇ ದಿನ 31 ಜನರಿಗೆ ಕೊರೊನಾ ಸೋಂಕು
ಜಿಲ್ಲೆಯಲ್ಲಿ ಶನಿವಾರ 31 ಜನರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. 

ಶಿವಮೊಗ್ಗ ನಗರ 13, ಶಿವಮೊಗ್ಗ ಗ್ರಾಮಾಂತರದಲ್ಲಿ 1 ಪ್ರಕರಣ ಪತ್ತೆಯಾಗಿದೆ. ಸೊರಬ ತಾಲ್ಲೂಕಿನಲ್ಲಿ 12, ಹೊಸನಗರ 2, ಶಿಕಾರಿಪುರ, ಸಾಗರ, ತೀರ್ಥಹಳ್ಳಿಯಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ. ಗ್ರಾಮೀಣ ಪ್ರದೇಶಗಳಲ್ಲೂ ವೈರಸ್‌ ಹರಡುತ್ತಿದ್ದು, ಸಮುದಾಯಕ್ಕೆ ಪಸರಿಸುವ ಆತಂಕ ಮೂಡಿಸಿದೆ.

ಪಿ–14387ರ ರೋಗಿಯ ಪ್ರಥಮ ಸಂಪರ್ಕದಿಂದ 27 ವರ್ಷದ ಯುವಕ (ಪಿ–19764), 88 ವರ್ಷದ ವೃದ್ಧ (ಪಿ–19765), 25 ವರ್ಷದ ಯುವಕ (ಪಿ–19766),  45 ವರ್ಷದ ಪುರುಷ (ಪಿ–19767), 30 ವರ್ಷದ ಪುರುಷ (ಪಿ–19768), 46 ವರ್ಷದ ಪುರುಷ (ಪಿ–19769), 39 ವರ್ಷದ ಮಹಿಳೆ (ಪಿ–19770), 28 ವರ್ಷದ ಯುವಕ (ಪಿ–19771), 19 ವರ್ಷದ ಯುವಕ (ಪಿ–19772), 48 ವರ್ಷದ ಪುರುಷ (ಪಿ–19773), 21 ವರ್ಷದ ಯುವಕ (ಪಿ–19774), 50 ವರ್ಷದ ಪುರುಷ (ಪಿ–19775)ರಿಗೆ ಸೋಂಕು ತಗುಲಿದೆ.

ಪಿ–16647ರ ರೋಗಿಯ ಸಂಪರ್ಕದಿಂದ 24 ವರ್ಷದ ಯುವಕ (ಪಿ–19779),  28 ವರ್ಷದ ಯುವಕ (ಪಿ–19780), 52 ವರ್ಷದ ಮಹಿಳೆ (ಪಿ–19781), 60 ವರ್ಷದ ಮಹಿಳೆ (ಪಿ–19782), 30 ವರ್ಷದ ಮಹಿಳೆ (ಪಿ–19783), 10 ವರ್ಷದ ಬಾಲಕ (ಪಿ–19784), 24 ವರ್ಷದ ಯುವಕ  (ಪಿ–19785) ವೈರಸ್‌ಗೆ ಒಳಗಾಗಿದ್ದಾರೆ.

ಪಿ–8818ರ ಸಂಪರ್ಕದಿಂದ 74 ವರ್ಷದ ಪುರುಷ (ಪಿ–19757), ಪಿ–15353 ಸಂಪರ್ಕದಿಂದ 28 ವರ್ಷದ ಯುವಕ  (ಪಿ–19758), ಪಿ–13227ರ ಸಂಪರ್ಕದಿಂದ 30 ವರ್ಷದ ಪುರುಷ (ಪಿ–19759)ರಿಗೆ, ಪಿ–14389 ಸಂಪರ್ಕದಿಂದ 67 ವರ್ಷದ ಮಹಿಳೆ (ಪಿ–19762), 36 ವರ್ಷದ ಮಹಿಳೆ (ಪಿ–19763),  ಸೋಂಕು ತಗುಲಿದೆ. 

30 ವರ್ಷದ ಪುರುಷ  (ಪಿ–19760), 82 ವರ್ಷದ ವೃದ್ಧ (ಪಿ–19761), 38 ವರ್ಷದ ಮಹಿಳೆ (ಪಿ–19776), 48 ವರ್ಷದ ಮಹಿಳೆ (ಪಿ–19778), 61 ವರ್ಷದ ಪುರುಷ (ಪಿ–19787),  ಸಂಪರ್ಕದ ಮೂಲ ಪತ್ತೆಯಾಗಿಲ್ಲ. ಬೆಂಗಳೂರಿನಿಂದ ಬಂದಿದ್ದ 23 ವರ್ಷದ ಯುವಕ (ಪಿ–19777),  46 ವರ್ಷದ ಪುರುಷ (ಪಿ–19786) ಸೋಂಕು ಇರುವುದು ದೃಢಪಟ್ಟಿದೆ. 82 ವರ್ಷದ ವೃದ್ಧ ಹಾಗೂ 10 ವರ್ಷದ ಬಾಲಕ ಸೋಂಕಿಗೆ ಒಳಗಾಗಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 253ಕ್ಕೇರಿದೆ. ಇದುವರೆಗೂ 117 ಜನರು ಗುಣಮುಖರಾಗಿದ್ದಾರೆ. ನಾಲ್ವರು ಮೃತಪಟ್ಟಿದ್ದಾರೆ. 132 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 

ಹೊರ ಜಿಲ್ಲೆಯಿಂದ ಚಿಕಿತ್ಸೆಗೆ ಬಂದ ಇಬ್ಬರು ಸೇರಿದಂತೆ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ. ಕಂಟೋನ್ಮೆಂಟ್‌ ಜೋನ್‌ಗಳ ಸಂಖ್ಯೆ ಇಂದು 55ಕ್ಕೆ ಏರಿಕೆಯಾಗಿದೆ. ಹೊಸನಗರ ತಾಲ್ಲೂಕು ಗವಟೂರಿನ ಇಬ್ಬರು ಮಹಿಳೆಯರಿಗೆ ಸೋಂಕು ತಗುಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು