ಗುರುವಾರ , ಮೇ 6, 2021
26 °C

ಮೊಬೈಲ್ ಟವರ್ ಬ್ಯಾಟರಿ ಕಳವು: 6 ಜನರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೊರಬ: ಮೊಬೈಲ್ ಟವರ್‌ನಲ್ಲಿ ಅಳವಡಿಸಿದ್ದ ಬ್ಯಾಟರಿಗಳನ್ನು ಕಳವು ಮಾಡಿದ ಆರು ಆರೋಪಿಗಳನ್ನು ಗುರುವಾರ ಬಂಧಿಸುವಲ್ಲಿ ಸೊರಬ ಪೊಲೀಸರು ಯಶಸ್ವಿಯಾಗಿದ್ದಾರೆ.

ಸೊರಬದ ಕುದುರೆ ಗಣಿಯ ಗಣೇಶ, ಹಾವೇರಿಯ ಚಂದ್ರು, ಶಿರಸಿಯ ದೀಪಕ್, ಸಂದೀಪ, ಯುವರಾಜ್, ಉತ್ತರ ಪ್ರದೇಶ ಮೂಲದ ಗುಲ್ಘಾಮ್ ಮಲ್ಲಿಕ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ತಾಲ್ಲೂಕಿನ ಮಾವಲಿ ಗ್ರಾಮದಲ್ಲಿರುವ ಜಿಯೊ ಮೊಬೈಲ್ ಟವರ್‌ನಲ್ಲಿ ಅಳವಡಿಸಿದ್ದ 48 ಬ್ಯಾಟರಿಗಳನ್ನು ಮಂಗಳವಾರ ಕಳವು ಮಾಡಲಾಗಿತ್ತು. ಈ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು ಕಳ್ಳರನ್ನು ಪತ್ತೆಹಚ್ಚಲು ಕಾರ್ಯಾಚರಣೆ ಕೈಗೊಂಡಿದ್ದರು.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಗುರುವಾರ ಪಟ್ಟಣದ ಕಾನುಕೊಪ್ಪದ ಬಳಿ 2 ಲಗೇಜ್ ಆಟೊದಲ್ಲಿ ಕಳವು ಮಾಡಿ ಸಾಗಿಸುತ್ತಿದ್ದ ಬ್ಯಾಟರಿಗಳ ಸಮೇತ 2 ಲಗೇಜ್ ಆಟೊ ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

ಸಿಪಿಐ ಮರುಳಸಿದ್ದಪ್ಪ ಮಾರ್ಗದರ್ಶನದಲ್ಲಿ ಪಿಎಸ್‍ಐ ಟಿ.ಬಿ.ಪ್ರಶಾಂತ್ ಕುಮಾರ್ ನೇತೃತ್ವದಲ್ಲಿ ಎಎಸ್‍ಐ ಶಬ್ಬೀರ್ ಖಾನ್, ಸಿಬ್ಬಂದಿ ದಿನೇಶ್, ಸಂದೀಪ್, ಪ್ರಭಾಕರ್, ಮೋಹನ್, ಉಮೇಶ್, ಶಿವಾಜಿ, ಸಿದ್ದನಗೌಡ, ಮಂಜುನಾಥ್ ದೈವಜ್ಞ ಕಾರ್ಯಾಚರಣೆಯಲ್ಲಿ ತೊಡಗಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.