ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಬಾರಿಯ ವ್ಯಾಪಾರ ಪರವಾನಗಿಗೆ ಆಗ್ರಹ

Last Updated 20 ಮೇ 2020, 14:06 IST
ಅಕ್ಷರ ಗಾತ್ರ

ಶಿವಮೊಗ್ಗ:ಪ್ರತಿ ವರ್ಷವೂವ್ಯಾಪಾರ ಪರವಾನಗಿ ಪ್ರಮಾಣ ಪತ್ರ ಪಡೆಯುವ ಪದ್ಧತಿ ಬದಲಾಯಿಸಿ, ಒಂದೇಬಾರಿ (ಒನ್ ಟೈಮ್ ಟ್ರೇಡ್ ಲೈಸೆನ್ಸ್)ಪಡೆಯಲು ಕಾಯ್ದೆ ರೂಪಿಸಬೇಕು ಎಂದುಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಡಿ.ಎಸ್.ಅರುಣ್ ಆಗ್ರಹಿಸಿದರು.

ರಾಜ್ಯದಲ್ಲಿ ಪ್ರಸ್ತುತ ನಗರದ ಉದ್ದಿಮೆದಾರರು, ವಾಣಿಜ್ಯೋದ್ಯಮಿಗಳು ಪ್ರತಿ ವರ್ಷ ನಗರಸಭೆ, ಮಹಾನಗರ ಪಾಲಿಕೆಯಿಂದ ಉದ್ದಿಮೆ ಪರವಾನಗಿ ಪತ್ರ ಪಡೆಯಬೇಕಿದೆ. ಇದರಿಂದ ಸಮಯ ವ್ಯರ್ಥವಾಗುತ್ತದೆ. ದಂಡ, ಹಣ ವಸೂಲಿ, ಮಿತಿಮೀರಿದ ವೆಚ್ಚದ ಪರಿಣಾಮ ವರ್ತಕರುಶೋಷಣೆಗೆ ಒಳಗಾಗುತ್ತಿದ್ದಾರೆ.ಒಂದೇ ಸಲ ಪರವಾನಗಿ ಪ್ರಮಾಣಪತ್ರನೀಡುವವ್ಯವಸ್ಥೆ ಜಾರಿಯಾದರೆಸ್ಥಳೀಯ ಸಂಸ್ಥೆಗಳ ಆದಾಯವು ಹೆಚ್ಚಾಗಲಿದೆ. ಆನ್‌ಲೈನ್ ಮೂಲಕವೂಪರವಾನಗಿಪಡೆಯುವವ್ಯವಸ್ಥೆ ಮಾಡಬೇಕುಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರನ್ನು (ಎಂಎಸ್ಎಂಇ) ಪ್ರೋತ್ಸಾಹಿಸುವಂತೆ ನಿರಂತರವಾಗಿ ಕೇಂದ್ರ, ರಾಜ್ಯಸರ್ಕಾರಗಳಿಗೆಮನವಿ ಮಾಡಿದ್ದೇವೆ.ಎಂಎಸ್ಎಂಇಗಳಿಗೆ ನೆರವು ನೀಡಲು ಕೇಂದ್ರ ಸರ್ಕಾರ ಪ್ಯಾಕೇಜ್‌ನಲ್ಲಿ ಘೋಷಣೆ ಮಾಡಿದೆ. ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಮುರಳೀಧರ್ನೇತೃತ್ವದಲ್ಲಿಮೇ 22ರಂದು ಸಂಜೆ 7ಕ್ಕೆಆನ್‌ಲೈನ್ ಚರ್ಚೆ ಆಯೋಜಿಸಲಾಗಿದೆ. ಭಾಗವಹಿಸಲು ಇಚ್ಛಿಸುವಶಿವಮೊಗ್ಗದ ವರ್ತಕರು, ಉದ್ದಿಮೆದಾರರು ನೋಂದಣಿ ಮಾಡಿಸಬಹುದು. ಮೊ70196 63300 ಸಂಪರ್ಕಿಸಬಹುದು ಎಂದರು.

ಜಿಲ್ಲೆಯಲ್ಲಿ ಸುಮಾರು 14 ಸಾವಿರಕ್ಕೂ ಹೆಚ್ಚು ವರ್ತಕರಿದ್ದಾರೆ. ಸುಮಾರು 2,500 ವರ್ತಕರು ಪರವಾನಗಿ ಪಡೆದಿದ್ದಾರೆ. ಪ್ರತಿ ವರ್ಷ ಪರವಾನಗಿ ನವೀಕರಣ ಮಾಡಿಸಿಕೊಳ್ಳಲು ಅಡ್ಡಿಯಾಗುತ್ತಿರುವುದು ಇದಕ್ಕೆ ಕಾರಣ ಎಂದು ಅಭಿಪ್ರಾಯಪಟ್ಟರು.

ದೇವಕಾತಿಕೊಪ್ಪ ಕೈಗಾರಿಕಾಭಿವೃದ್ಧಿ ಪ್ರದೇಶದಲ್ಲಿ ಒಂದು ಎಕರೆಗೆ ₨ 62.50 ನಿಗದಿಪಡಿಸಿ, ಕೈಗಾರಿಕೋದ್ಯಮಿಗಳಿಗೆ ವಿತರಿಸಲಾಗಿತ್ತು. ಅದೇ ರೀತಿ ಪಕ್ಕದಲ್ಲಿರುವ ಸಿದ್ಲಿಪುರ ಕೈಗಾರಿಕಾ ಪ್ರದೇಶದಲ್ಲಿ ಎಕರೆಗೆ ₨ 1.11 ಕೋಟಿ ನಿಗದಿ ಮಾಡಲಾಗಿದೆ. ದುಬಾರಿ ಹಣ ನೀಡಲು ಕೈಗಾರಿಕೋದ್ಯಮಿಗಳುಹಿಂದೇಟು ಹಾಕುತ್ತಿದ್ದಾರೆ. ದೇವಕಾತಿಕೊಪ್ಪದಷ್ಟೇ ಹಣ ನಿಗದಿ ಮಾಡಲು ಕೋರಲಾಗುವುದು ಎಂದು ಸಂಘದ ಅಧ್ಯಕ್ಷ ಜಿ.ಆರ್.ವಾಸುದೇವ್ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಮಾಜಿ ಅಧ್ಯಕ್ಷ ಡಿ.ಎಂ.ಶಂಕರಪ್ಪ, ಪಿಆರ್‌ಒಜಿ.ವಿಜಯಕುಮಾರ್, ಉದಯಕುಮಾರ್, ಬಿ.ಗೋಪಿನಾಥ್, ಬಿ.ಆರ್.ಸಂತೋಷ್, ಎನ್.ಗೋಪಿನಾಥ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT