‘ಸ್ಕಿಲ್ ಅಟ್ ಸ್ಕೂಲ್’ ಆರಂಭಕ್ಕೆ ಸಿದ್ಧತೆ
ಮುಂಬರುವ ಶೈಕ್ಷಣಿಕ ವರ್ಷದಿಂದ ‘ಸ್ಕಿಲ್ ಅಟ್ ಸ್ಕೂಲ್’ ಹೆಸರಲ್ಲಿ 8ನೇ ತರಗತಿಯಿಂದಲೇ ವಿದ್ಯಾರ್ಥಿಗಳಿಗೆ ಕೌಶಲ ಆಧರಿತ ಶಿಕ್ಷಣ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ‘ವಿದ್ಯಾರ್ಥಿಗಳು ಈವರೆಗೂ ಪಿಯುಸಿ ಹಂತದಲ್ಲಿ ಕಲೆ ವಾಣಿಜ್ಯ ಮತ್ತು ವಿಜ್ಞಾನ ವಿಷಯದ ಕೋರ್ಸ್‌ಗಳನ್ನು ಮಾತ್ರ ಕಲಿಯುತ್ತಿದ್ದರು. ಈಗ 25 ಕೋರ್ಸ್ ಕಲಿಯಲು ಅವಕಾಶವಿದೆ. ಅದರಲ್ಲಿ ಕೆಲವು ಕೌಶಲ ಆಧರಿತ ಕೋರ್ಸ್‌ಗಳಿದ್ದು ‘ಸ್ಕಿಲ್ ಅಟ್ ಸ್ಕೂಲ್’ ಕಾರ್ಯಕ್ರಮ ರೂಪಿಸಲಾಗಿದೆ. 8ನೇ ತರಗತಿಯಿಂದಲೇ ಇದನ್ನು ಆರಂಭಿಸಲಾಗುತ್ತಿದೆ. ಸರ್ಕಾರದ ಸಂಪನ್ಮೂಲ ಬಳಸಿ ಯೋಜನೆ ಅನುಷ್ಠಾನಕ್ಕೆ ತರಲಾಗುತ್ತಿದೆ’ ಎಂದರು.