ಶಿವಮೊಗ್ಗ: ‘ಕೊಠಡಿ ನಿರ್ಮಾಣಕ್ಕೆ ಅನುದಾನ ಶೀಘ್ರ’: ಶಾಸಕ ಈಶ್ವರಪ್ಪ

ಶಿವಮೊಗ್ಗ: ಮಕ್ಕಳ ಕ್ಷೇಮಾಭಿವೃದ್ಧಿಗಾಗಿ ಹೆಚ್ಚಿನ ಕಾಲೇಜು ಕೊಠಡಿ ನಿರ್ಮಾಣಕ್ಕೆ ಶೀಘ್ರದಲ್ಲೇ ಅನುದಾನ ಬಿಡುಗಡೆ ಮಾಡುವುದಾಗಿ ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.
ಇಲ್ಲಿನ ಸಹ್ಯಾದ್ರಿ ವಾಣಿಜ್ಯ ಕಾಲೇಜು ಆವರಣದಲ್ಲಿ ವಿದ್ಯಾರ್ಥಿ ಸಾಂಸ್ಕೃತಿಕ, ಕ್ರೀಡಾ, ಎನ್‌ಸಿಸಿ, ಎನ್‌ಎಸ್‌ಎಸ್, ಯುವ ರೆಡ್ ಕ್ರಾಸ್, ರೋವರ್ಸ್- ರೇಂಜರ್ಸ್ ಸಮಾರಂಭ ಉದ್ಘಾಟಿಸಿ ಅವರು
ಮಾತನಾಡಿದರು.
‘ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಮಕ್ಕಳು ಒತ್ತಡದ ಸ್ಥಿತಿಯಲ್ಲಿ ವಿದ್ಯೆ ಕಲಿಯುವುದು ಬೇಡ. ಶೀಘ್ರದಲ್ಲಿ ಕಾಲೇಜು ಕೊಠಡಿ ನಿರ್ಮಾಣಕ್ಕೆ ಸರ್ಕಾರದ ಜೊತೆ ಚರ್ಚಿಸಿ ಅನುದಾನ ಬಿಡುಗಡೆ ಮಾಡಿಸುವ ಪ್ರಯತ್ನ ಮಾಡುತ್ತೇನೆ’ ಎಂದು ಹೇಳಿದರು.
‘ಕನ್ನಡ ನಮ್ಮ ಅಂತರಂಗದ ಭಾಷೆ ಆಗಬೇಕು. ಸಾಧ್ಯವಾದಷ್ಟು ಕನ್ನಡ ಬಳಸೋಣ. ಸರ್ಕಾರಿ ಕೆಲಸವೇ ಬೇಕು ಎಂದು ಓದಬೇಡಿ. ಸ್ವತಂತ್ರವಾಗಿ, ಸ್ವಾವಲಂಬಿಯಾಗಿ ಬದುಕುತ್ತೇವೆ. ಸುಂದರ ಬದುಕು ಕಟ್ಟಿಕೊಳ್ಳುತ್ತೇವೆ ಎಂಬ ಆತ್ಮ ವಿಶ್ವಾಸ ಇರಲಿ’ ಎಂದು ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಹೇಳಿದರು.
ಹಿರಿಯ ವಿದ್ಯಾರ್ಥಿ, ಕ್ರೀಡಾಪಟು ಮಂಜುನಾಥ ಎಚ್. ಮಾತನಾಡಿ, ‘ಹತ್ತು ವರ್ಷಗಳ ಹಿಂದೆ ನಾನೂ ಕೂಡ ಹಿಂದಿನ ಸಾಲಿನಲ್ಲಿ ಕೂರುತ್ತಿದ್ದೆ. ಗುರುಗಳ ಮಾರ್ಗದರ್ಶನ ಪಡೆದು ಕ್ರೀಡೆಯಲ್ಲಿ ಯಶಸ್ವಿಯಾಗಿ ನಿಮ್ಮ ಮುಂದೆ ನಿಂತಿದ್ದೇನೆ’ ಎಂದರು.
‘ಸರ್ಕಾರದಿಂದ ಕ್ರೀಡೆಗೆ ಸಹಕಾರ ಖಂಡಿತ ಇದೆ. ಆದರೆ ವಿದ್ಯಾರ್ಥಿಗಳು ಅದನ್ನು ಸದುಪಯೋಗ ಪಡೆದುಕೊಳ್ಳುವುದರಲ್ಲಿ ಎಡುವು ತ್ತಿದ್ದಾರೆ’ ಎಂದರು.
ಕುವೆಂಪು ವಿಶ್ವವಿದ್ಯಾಲಯ ಕುಲಸಚಿವ ನವೀನ್ ಕುಮಾರ್ ಎಸ್.ಕೆ, ಪ್ರಾಂಶುಪಾಲರಾದ ಪ್ರೊ. ಎಂ.ಕೆ ವೀಣಾ, ಪ್ರೊ. ಕೆ.ಬಿ ಧನಂಜಯ,
ಪ್ರೊ. ರಾಜೇಶ್ವರಿ ಎನ್, ಕ್ರೀಡಾ ಸಂಚಾಲಕ ಪ್ರೊ.ಕುಂದನ್ ಬಸವರಾಜ್, ಸಾಂಸ್ಕೃತಿಕ ಸಂಚಾಲಕ ಗಿರಿಧರ್ ಕೆ.ವಿ, ಐಕ್ಯೂಎಸಿ ಸಂಚಾಲಕಿ ಪ್ರೊ.ಕೆ.ಎಸ್. ಸರಳ, ಶಿವಮೂರ್ತಿ ಎ., ಶುಭ ಮರವಂತೆ, ಶಶಿಧರ್ ಯು.
ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.