ಶಿವಮೊಗ್ಗ: ಜಿಲ್ಲೆಯ ಎಲ್ಲೆಡೆ ಮಳೆಯ ಅಬ್ಬರ ಮುಂದುವರಿದಿದೆ. ಸೊರಬ, ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮರಗಳು ಧರೆಗೆ ಉರುಳಿವೆ. ಹೊಸನಗರದಲ್ಲಿ ಮನೆಗಳು ಕುಸಿದಿವೆ.
ಚಂದ್ರಗುತ್ತಿ ಸಮೀಪ ಶತಮಾನದ ಮರ ಉರುಳಿ ಬಿದ್ದಿದೆ. ಹಣಗೆರೆ ಮಾರ್ಗದಲ್ಲೂ ಬೃಹತ್ ಮರ ರಸ್ತೆಗೆ ಬಿದ್ದ ಪರಿಣಾಮ ಕೆಲವು ಸಮಯ ಸಂಚಾರಕ್ಕೆ ಅಡ್ಡಿಯಾಗಿತ್ತು.
ಜಲಾಶಯಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಒಂದೇ ದಿನ ಲಿಂಗನಮಕ್ಕಿ ಜಲಾಶಯಕ್ಕೆ 2 ಅಡಿ, ಭದ್ರಾ ಜಲಾಶಯಕ್ಕೆ 1.6 ಅಡಿ ನೀರು ಬಂದಿದೆ.
ಲಿಂಗನಮಕ್ಕಿ ವ್ಯಾಪ್ತಿಯಲ್ಲಿ 12 ಸೆಂ.ಮೀ, ಮಾಣಿ ವ್ಯಾಪ್ತಿಯಲ್ಲಿ 19.4, ಯಡೂರಿನಲ್ಲಿ 16.6, ಹುಲಿಕಲ್‌ನಲ್ಲಿ 13.2 ಸೆಂ.ಮೀ. ಮಳೆಯಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.