ರಿಪ್ಪನ್‌ಪೇಟೆ:ಹೊಂಬುಜ ಅತಿಶಯ ಕ್ಷೇತ್ರದಲ್ಲಿ ಮಾರ್ಚ್ 13ರಿಂದ 18 ರವರೆಗೆ ಭಗವಾನ್ ಪಾರ್ಶ್ವನಾಥ ತೀರ್ಥಂಕರರ ಮತ್ತು ಜಗನ್ಮಾತೆ ಪದ್ಮಾವತಿ ಅಮ್ಮನವರ ವಾರ್ಷಿಕ ರಥಯಾತ್ರಾ ಜಾತ್ರಾ ಮಹೋತ್ಸವವು ಮಠದ ಪೀಠಾಧಿಕಾರಿ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ನೇತೃತ್ವದಲ್ಲಿ ಜರುಗಲಿದೆ.

ಮಾರ್ಚ್ 13 ರಂದು ಶುಕ್ರವಾರ ಇಂದ್ರಪ್ರತಿಷ್ಠೆ, ವಿಮಾನಶುದ್ಧಿ, ಯಕ್ಷಪ್ರತಿಷ್ಠೆ, ಧ್ವಜಾರೋಹಣ, ಮಹಾನೈವೇದ್ಯ ಪೂಜೆ, ನಾಂದಿಮಂಗಲ, ವಾಸ್ತುಶಾಂತಿ, ಮೃತ್ತಿಕ ಸಂಗ್ರಹ ಹಾಗೂ ನಾಗವಾಹನೋತ್ಸವ ನಡೆಯಲಿದೆ. 14 ರಂದು ಶ್ರೀಸ್ವಾಮಿ ಮತ್ತು ಅಮ್ಮನವರ ಸನ್ನಿಧಿಯಲ್ಲಿ ಅಭಿಷೇಕ ಕಲಿಕುಂಡಯಂತ್ರಾರಾಧನೆ ಸಿಂಹವಾಹನೋತ್ಸವ,15 ರಂದು ಜಲಾಗ್ನಿ ಹೋಮ, ಶಾಂತಿ ಚಕ್ರಾರಾಧನೆ, ಶ್ರೀಬಲಿ ಸಂಜೆ 6 ಕ್ಕೆ ಧಾರ್ಮಿಕ ಸಭೆ, ಸಿದ್ಧಾಂತ ಕೀರ್ತಿ ಪ್ರಶಸ್ತಿ ಪ್ರದಾನ ನಂತರ ಬೆಳ್ಳಿ ರಥೋತ್ಸವ ಮತ್ತು ಪುಪ್ಪಾರಥೋತ್ಸವ ನಡೆಯಲಿದೆ.

16 ರಂದು ಮಹಾನೈವೇದ್ಯ ಪೂಜೆ, ರಥಾರೋಹಣಕ್ಕೆ ಪ್ರಸಾದ ಬೇಡಿಕೆ ರಥಾರೋಹಣ, ಮಹಾರಥೋತ್ಸವ,17ರಂದು ಪೂರ್ವಾಹ್ನತ್ರಕೂಟ ಜಿನಾಲಯದ ಗುಡ್ಡದ ಬಸದಿಯಲ್ಲಿ ಪಾರ್ಶ್ವನಾಥಸ್ವಾಮಿಗೆ 108 ಕಲಶಗಳ ಮಹಾಭಿಷೇಕ ಮತ್ತು ಸಂಘ ಪೂಜೆ ನಡೆಯಲಿದೆ.18 ರಂದು ಕುಂಕುಮೋತ್ಸವ ಮತ್ತು ಧ್ವಜಾರೋಹಣ ಶ್ರೀಗಳ ಸಾನಿಧ್ಯದಲ್ಲಿ ಜರುಗಲಿವೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.