ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿರಾರು ಜನರ ಹರ್ಷೋದ್ಗಾರದ ಮಧ್ಯೆ ಹೋರಿ ಹಬ್ಬ

Published 16 ನವೆಂಬರ್ 2023, 14:30 IST
Last Updated 16 ನವೆಂಬರ್ 2023, 14:30 IST
ಅಕ್ಷರ ಗಾತ್ರ

ಶಿಕಾರಿಪುರ: ಸಾವಿರಾರು ಜನರ ಹರ್ಷೋದ್ಗಾರದ ಮಧ್ಯೆ ಪಟ್ಟಣದ ದೊಡ್ಡಕೇರಿಯಲ್ಲಿ ಗುರುವಾರ ಹೋರಿ ಹಬ್ಬ ವಿಜೃಂಭಣೆಯಿಂದ ನಡೆಯಿತು.

ಜನಪದ ಸಂಸ್ಕೃತಿಯ ಪ್ರತೀಕವಾದ ಹೋರಿ ಬೆದರಿಸುವ ಸ್ಪರ್ಧೆಯನ್ನು ಜನತೆ ಅಭಿಮಾನದಿಂದ ಹೋರಿ ಹಬ್ಬ ಎಂದು ಕರೆಯುತ್ತಾರೆ. ಸಂಪ್ರದಾಯದಂತೆ ರೈತ ಸಮುದಾಯ ಹಲವು ವರ್ಷಗಳಿಂದ ಈ ಹಬ್ಬ ಆಚರಿಸುತ್ತಿದೆ. ಮಾಲೀಕರು ತಮ್ಮ ಹೋರಿಗಳನ್ನು ಕಾಲ್ಗೆಜ್ಜೆ, ಜೂಲಾ, ಬಲೂನ್, ಕೊಬ್ಬರಿ ಮಾಲೆ ಸೇರಿ ವಿವಿಧ ಅಲಂಕಾರಿಕ ವಸ್ತುಗಳಿಂದ ಸಿಂಗರಿಸಿದ್ದರು.

ಹೋರಿ ಓಡುವ ಸಂದರ್ಭದಲ್ಲಿ ತಮ್ಮ ಹೋರಿಗಳ ಹೆಸರು ಹೊಂದಿರುವ ಟಿ–ಶರ್ಟ್‌ಗಳನ್ನು ಹಾಕಿದ್ದ ಯುವಕರು ಹಾಗೂ ಹೋರಿ ಮಾಲೀಕರು ಹರ್ಷದಿಂದ ಓಡುತ್ತಿದ್ದರು. ಹೋರಿ ಬರುವ ಮುನ್ನ ತಮ್ಮ ಹೋರಿ ಹೆಸರಿನ ಧ್ವಜಗಳನ್ನು ಹಿಡಿದು ಸಾಗುತ್ತಿದ್ದರು. ಗಿಡ್ಡೇಶ್ವರ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಹೋರಿ ಬೆದರಿಸುವ ಹಬ್ಬಕ್ಕೆ ಚಾಲನೆ ನೀಡಲಾಯಿತು.

ಹೋರಿ ಹಬ್ಬದಲ್ಲಿ ಹಾವೇರಿ ಜಿಲ್ಲೆ ಸೇರಿದಂತೆ ಶಿಕಾರಿಪುರ ಪಟ್ಟಣ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳ ನೂರಾರು ಹೋರಿಗಳು ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿದವು. ಯಾವುದೇ ಅನಾಹುತ ಸಂಭವಿಸದಂತೆ ಆಯೋಜಕರು ಧ್ವನಿವರ್ಧಕ ಮೂಲಕ ಹೋರಿ ಸಾಗುವ ಬಗ್ಗೆ ಸೂಚನೆ ನೀಡುತ್ತಿದ್ದರು.

ವೇಗವಾಗಿ ಓಡುತ್ತಿದ್ದ ಹೋರಿಗಳನ್ನು ಹಿಡಿದು ಕೊಬ್ಬರಿ ಮಾಲೆಯನ್ನು ಕೀಳುತ್ತಿದ್ದ ಸಾಹಸಿಗಳ ದೃಶ್ಯ ನೋಡುಗರ ಗಮನ ಸೆಳೆಯಿತು. ಉತ್ತಮ ಪ್ರದರ್ಶನ ತೋರಿದ ಹೋರಿಗಳಿಗೆ ಆಯೋಜಕರು ಬಹುಮಾನ ವಿತರಿಸಿದರು.

ಶಿಕಾರಿಪುರದ ದೊಡ್ಡಕೇರಿಯಲ್ಲಿ ಗುರುವಾರ ದೀಪಾವಳಿ ಹಬ್ಬದ ಪ್ರಯುಕ್ತ ಹೋರಿ ಹಬ್ಬವು ವಿಜೃಂಭಣೆಯಿಂದ ನಡೆಯಿತು. ಚಿತ್ರ: ಎಚ್.ಎಸ್. ರಘು
ಶಿಕಾರಿಪುರದ ದೊಡ್ಡಕೇರಿಯಲ್ಲಿ ಗುರುವಾರ ದೀಪಾವಳಿ ಹಬ್ಬದ ಪ್ರಯುಕ್ತ ಹೋರಿ ಹಬ್ಬವು ವಿಜೃಂಭಣೆಯಿಂದ ನಡೆಯಿತು. ಚಿತ್ರ: ಎಚ್.ಎಸ್. ರಘು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT