ಶನಿವಾರ, ಅಕ್ಟೋಬರ್ 16, 2021
23 °C

ಶಿವಮೊಗ್ಗದಲ್ಲೂ ಅನೈತಿಕ ಪೊಲೀಸ್‌ಗಿರಿ: ಇಬ್ಬರು ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಮುಸ್ಲಿಂ ಯುವತಿಯನ್ನು ದ್ವಿಚಕ್ರವಾಹನದಲ್ಲಿ ಕರೆದುಕೊಂಡು ಬಂದ ಹಿಂದೂ ಯುವಕನನ್ನು ಶನಿವಾರ ನಗರದ ಟ್ಯಾಂಕ್‌ ಮೊಹಲ್ಲಾ ಯುವಕರು ಥಳಿಸಿದ್ದಾರೆ.

ಅನೈತಿಕ ಪೊಲೀಸ್‌ಗಿರಿ ನಡೆಸಿದ ಆರೋಪದ ಮೇಲೆ ಸುಹೇಲ್‌, ಶೋಯೇಬ್‌ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ರಾಹಿಂ ಪರಾರಿಯಾಗಿದ್ದಾನೆ.

ಶಿವಮೊಗ್ಗ ಸಮೀಪದ ಮಜ್ಜಿಗೆ ಹಳ್ಳಿಯ ಯುವತಿ ಕೆಲಸಕ್ಕೆ ಹೋಗಲು ತಡವಾಗಿದ್ದ ಕಾರಣ ಶಿವಮೊಗ್ಗದ ಗಾಂಧಿ ಬಜಾರ್‌ವರೆಗೆ  ಬಿಡುವಂತೆ ಅದೇ ಮಾರ್ಗದಲ್ಲಿ ಹೊರಟಿದ್ದ ಗ್ರಾಮದ ಯುವಕನನ್ನು ವಿನಂತಿಸಿದ್ದಾರೆ. ಆ ಯುವಕ ಗಾಂಧಿ ಬಜಾರ್‌ನಲ್ಲಿ ಇಳಿಸಿ ಹಿಂದಿರುಗುವಾಗ ಸ್ಥಳದಲ್ಲೇ ಇದ್ದ ಮುಸ್ಲಿಂ ಯುವಕರು ಅಡ್ಡಗಟ್ಟಿ ಥಳಿಸಿದ್ದಾರೆ.

ತಕ್ಷಣ ಅಲ್ಲೇ ಇದ್ದ ಹಿಂದೂ ಯುವಕರು ಹೊಡೆದಾಟಕ್ಕೆ ಮುಂದಾಗಿದ್ದಾರೆ. ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ.

‘ಕಿಡಿಗೇಡಿ ಯುವಕರು ಇಂತಹ ಕೃತ್ಯ ಎಸಗಿದ್ದಾರೆ. ತಕ್ಷಣ ಅವರನ್ನು ಬಂಧಿಸಲಾಗಿದೆ. ವದಂತಿ ಹಬ್ಬಿಸದಂತೆ ಸೂಚಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಪ್ರತಿಕ್ರಿಯಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.