ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲು ಮಳೆಯ ನಡುವೆ ಜಲಸಿರಿಯ ವೈಭವ

Last Updated 9 ಆಗಸ್ಟ್ 2021, 4:19 IST
ಅಕ್ಷರ ಗಾತ್ರ

ಕಾರ್ಗಲ್: ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದು, ಜಲಪಾತ ಪ್ರದೇಶದಲ್ಲಿ ಆಗಾಗ ಬಿಸಿಲು– ಮಳೆಯ ಕಣ್ಣಾಮುಚ್ಚಾಲೆಯ ನಡುವೆ ಜಲಸಿರಿಯ ವೈಭವ ನಳನಳಿಸುತ್ತಿದೆ.

ಈ ಪರ್ವಕಾಲದಲ್ಲಿ ರಾಜ್ಯ ಹೊರ ರಾಜ್ಯಗಳಿಂದ ಹೇರಳವಾಗಿ ಪ್ರವಾಸಿಗರು ಜೋಗಕ್ಕೆ ಲಗ್ಗೆ ಇಡುತ್ತಿದ್ದಾರೆ. ಹಸಿರು ಸಿರಿಯ ನಡುವೆ ಬಿಳಿ ಹಾಲ್ನೊರೆಯಂತೆ ಸೌಮ್ಯವಾಗಿ ಧುಮ್ಮಿಕ್ಕುವ ಜೋಗದ ಸೌಂದರ್ಯವನ್ನು ಸವಿಯಲು ಇದು ಸಕಾಲ. ಜಲಪಾತದಲ್ಲಿ ಅಬ್ಬರವಿರುವುದಿಲ್ಲ, ನೀರಿನ ಕೊರತೆಯೂ ಇರುವುದಿಲ್ಲ.

‘ಅತ್ಯಂತ ಎತ್ತರದಿಂದ ಗಂಭೀರವದನನಾಗಿ ಎಲ್ಲಿಯೂ ತಡೆಯಿಲ್ಲದೇ ಕಣಿವೆಯಾಳಕ್ಕೆ ಧುಮ್ಮಿಕ್ಕುವ ರಾಜಾ, ಹಗಲು ರಾತ್ರಿಯಲ್ಲಿ ಜಲಪಾತದ ಇರುವಿಕೆಯನ್ನು ತಿಳಿಸಿ ಗರ್ಜಿಸುವ ರೋರರ್, ಬಂಡೆಗಳ ಮೇಲೆ ಧುಮ್ಮಿಕ್ಕುವ ರಾಕೆಟ್, ಬಂಡೆಗಳ ಮೇಲೆ ನುಣುಪಾಗಿ ಕಣಿವೆಯಾಳಕ್ಕೆ ವಯ್ಯಾರದಿಂದ ಜಾರಿ ಬರುವ ರಾಣಿಯ ಸೌಂದರ್ಯ ಕಣ್ತುಂಬಿಕೊಳ್ಳುವುದಕ್ಕೆ ಹೇಳಿ ಮಾಡಿದಂತಹ ಸನ್ನಿವೇಶ’ ಎಂದು ಪ್ರವಾಸಿ ಗೈಡ್ ಸಿದ್ದರಾಜು ಹೇಳುತ್ತಾರೆ.

ಆದರೆ, ಕೋವಿಡ್ ಇದಕ್ಕೆ ತಡೆಯೊಡ್ಡಿದೆ. 72 ಗಂಟೆಗಳ ಮುಂಚೆ ಪಡೆದ ಕೊರೊನಾ ನೆಗಟಿವ್ ದೃಢೀಕರಣ ಪತ್ರವನ್ನು ತೋರಿಸುವುದು ಕಡ್ಡಾಯ ಮಾಡಿರುವುದು ಪ್ರವಾಸಿಗರ ಜೋಗ ವೀಕ್ಷಣೆಯ ಕನಸಿಗೆ ತಣ್ಣೀರು ಎರಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT