ಸೋಮವಾರ, ಜನವರಿ 25, 2021
21 °C

ಜ್ಯೂಸ್ ಕುಡಿದು ಮಕ್ಕಳ ಸಾವು ಪ್ರಕರಣ: ಈಗ ತಾಯಿಯೂ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಐದು ದಿನಗಳ ಹಿಂದೆ ಗಾಂಧಿ ಪಾರ್ಕ್‌ನಲ್ಲಿ ಜ್ಯೂಸ್ ಕುಡಿದು ಇಬ್ಬರು ಮಕ್ಕಳು ಮೃತಪಟ್ಟ ಪ್ರಕರಣದಲ್ಲಿ ತಾಯಿಯೂ ಶುಕ್ರವಾರ ಮೃತಪಟ್ಟಿದ್ದಾರೆ.

ಮಕ್ಕಳ ಸಾವಿನಿಂದ ತಾಯಿ ಗೀತಾ ಅಸ್ವಸ್ಥಳಾಗಿದ್ದರು. ಹೀಗಾಗಿ ಅವರನ್ನು ಮೆಗ್ಗಾನ್ ಸಾಂತ್ವನ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿದ್ದ ಗೀತಾ ಶುಕ್ರವಾರ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿದ್ದಾಗ ಗೀತಾ ಊಟ ತ್ಯಜಿಸಿದ್ದರು ಎಂದು ತಿಳಿದು ಬಂದಿದೆ.

ಜ. 4ರಂದು ತಾಯಿ ಗೀತಾರೊಂದಿಗೆ ಗಾಂಧಿ ಪಾರ್ಕ್‌ಗೆ ಬಂದಿದ್ದ ಅಶ್ವಿನ್ (8), ಆಕಾಂಕ್ಷಾ (4) ಜ್ಯೂಸ್ ಸೇವಿಸಿದ್ದರು. ಕೆಲವೇ ಹೊತ್ತಲ್ಲಿ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದ ಮಕ್ಕಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದರು. ತಾಯಿಯೇ ಮಕ್ಕಳಿಗೆ ವಿಷ ಹಾಕಿದ್ದಾರೆ ಎಂದು ಆರೋಪಿಸಲಾಗಿತ್ತು. ಮತ್ತೊಂದೆಡೆ ಜ್ಯೂಸ್‌ನಿಂದ ಫುಡ್‌ ಪಾಯ್ಸನ್ ಆಗಿರುವ ಕುರಿತು ಶಂಕೆ ಇತ್ತು. ಪೊಲೀಸರು ಜ್ಯೂಸ್‌ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಕ್ಕೆ ಕಳುಹಿಸಿದ್ದರು. ವರದಿ ಬರುವುದು ಬಾಕಿ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.