ಶಿವಮೊಗ್ಗ: ಬಜರಂಗ ದಳದ ಕಾರ್ಯಕರ್ತನಾದ ಹರ್ಷ ಹತ್ಯೆಯ ಸಂಬಂಧ ಮೂವರು ಆರೋಪಿಗಳನ್ನು 24 ತಾಸುಗಳ ಒಳಗೆ ಶಿವಮೊಗ್ಗ ಪೊಲೀಸರನ್ನು ಒಳಗೊಂಡ ವಿಶೇಷ ತನಿಖಾ ತಂಡ ಬಂಧಿಸಿದೆ.

ಶಿವಮೊಗ್ಗ ಬುದ್ಧ ನಗರದ ಖಾಸಿಫ್ (30), ಜೆಪಿ ನಗರ ಸೈಯ್ಯದ್ ನಧೀಂ (20) ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಮೂವರು ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸೋಮವಾರ ಬೆಂಗಳೂರಿನಲ್ಲಿ ತಿಳಿಸಿದರು.

‘ಆರೋಪಿಗಳ ಪತ್ತೆಗೆ ಡಿಎಸ್‌ಪಿಗಳ ನೆತೃತ್ವದಲ್ಲಿ ನಾಲ್ಕು ತಂಡ ರಚಿಸಲಾಗಿತ್ತು. ಕೊಲೆಯ ನಂತರ ರಾತ್ರಿ ತಾಳಗುಪ್ಪ–ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ ಮೂಲಕ ಬೆಂಗಳೂರಿಗೆ ಹೋಗಿದ್ದರು. ಅಲ್ಲಿಗೆ ತೆರಳಿದ ವಿಶೇಷ ತನಿಖಾ ತಂಡ ಇಬ್ಬರನ್ನು ಬಂಧಿಸಿದೆ. ಉಳಿದ ಇಬ್ಬರ ಪತ್ತೆ ಕಾರ್ಯ ಮುಂದುವರಿದಿದೆ’ ಎಂದು ಎಡಿಜಿಪಿ ಎಸ್.ಮುರುಗನ್ ಪ್ರತಿಕ್ರಿಯಿಸಿದರು.

ಪಾರ್ಥಿವ ಶರೀರದ ಮೆರವಣಿಗೆ: ಕಲ್ಲು ತೂರಾಟ, ಗಾಳಿಯಲ್ಲಿ ಗುಂಡು, ಲಾಠಿಚಾರ್ಚ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.