ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ನಾಡಿನಲ್ಲಿ ಸಮೃದ್ಧಿ ತರಲಿ

ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ ತಹಶೀಲ್ದಾರ್
Last Updated 16 ಅಕ್ಟೋಬರ್ 2021, 4:43 IST
ಅಕ್ಷರ ಗಾತ್ರ

ಹೊಸನಗರ: ದೇಶ ಸಂಕಷ್ಟದಲ್ಲಿದ್ದು, ಈ ಬಾರಿಯ ದಸರಾ ಎಲ್ಲಾ ಸಂಕಷ್ಟಗಳನ್ನು ನಿವಾರಿಸಿ ದೇಶಕ್ಕೆ ಸುಖ, ಸಮೃದ್ಧಿ ತರಲಿ ಎಂದು ತಹಶೀಲ್ದಾರ್ ವಿ.ಎಸ್. ರಾಜೀವ್ ಹೇಳಿದರು.

ಇಲ್ಲಿನ ಕಚೇರಿಯ ಆವರಣದಲ್ಲಿ ದಸರಾ ಅಂಗವಾಗಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಮಾತನಾಡಿದರು.

ಮಹಾನವಮಿಯ ಮೊದಲ ಮೂರು ದಿನ ದುರ್ಗೆಯನ್ನು, ನಂತರ ಮೂರು ದಿನ ಲಕ್ಷ್ಮೀಯನ್ನು, ತದನಂತರ ಮೂರು ದಿನಗಳಂದು ಸರಸ್ವತಿಯನ್ನು ಪೂಜಿಸಲಾಗುವುದು. ಇಂದು ದಸರಾದ ಕೊನೆಯ ದಿನವಾದ ವಿಜಯಲಕ್ಷ್ಮೀ ಪೂಜೆ ಮಾಡುವುದು ಸಂಪ್ರದಾಯ. ಆದರೆ ಇಂದು ನೆಪ ಮಾತ್ರಕ್ಕೆ ಹಬ್ಬ ಆಚರಿಸುವ ಸಂಪ್ರದಾಯ ಬೆಳೆಯುತ್ತಿದೆ. ಯುವ ಪೀಳಿಗೆಯು ನಮ್ಮ ಹಿರಿಯರಿಂದ ಸಂಪ್ರದಾಯಗಳನ್ನು ಕಲಿಯಬೇಕು’ ಎಂದು ಸಲಹೆ ನೀಡಿದರು.

ಇಲ್ಲಿನ ಹಳೇ ಸಾಗರ ರಸ್ತೆಯ ರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಬನ್ನಿ ಮಂಟಪಕ್ಕೆ ಪೂಜೆ ಸಲ್ಲಿಸಿ ಬನ್ನಿ ಕಡಿದು ಶುಭ ಕೋರಿದರು.

ದಸರಾ ಹಬ್ಬದ ಸಮಿತಿಯ ಅಧ್ಯಕ್ಷ ಎಂ.ಎನ್. ಸುದಾಕರ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಮರಿಯಪ್ಪ, ಉಪಾಧ್ಯಕ್ಷೆ ಕೃಷ್ಣವೇಣಿ, ಸದಸ್ಯರಾದ ಹಾಲಗದ್ದೆ ಉಮೇಶ್, ಅಶ್ವಿನಿ, ಸುರೇಂದ್ರ ಕೂಟ್ಯಾನ್, ಗುರುರಾಜ್, ನಾಗಪ್ಪ, ಗಾಯಿತ್ರಿ ನಾಗರಾಜ್, ನಾಡಹಬ್ಬಗಳ ಸಮಿತಿಯ ಸದಸ್ಯರಾದ ಶ್ರೀಧರ ಉಡುಪ, ಶ್ರೀನಿವಾಸ್ ಕಾಮತ್, ರಾಜಮೂರ್ತಿ, ವರ್ತಕರ ಸಂಘದ ಅಧ್ಯಕ್ಷ ವಿಜೇಂದ್ರ ಶೇಟ್, ಗ್ರೇಡ್–2 ತಹಶೀಲ್ದಾರ್ ರಾಕೇಶ್, ಸಹಾಯಕರಾದ ವಿನಯ್ ಎಂ. ಆರಾದ್ಯ, ಶಿರಸ್ತೇದಾರ್ ಶ್ರೀಕಾಂತ್ ಹೆಗ್ಡೆ, ಸುಧೀಂದ್ರ ಕುಮಾರ್, ಪಿಎಸ್ಐ ರಾಜೇಂದ್ರ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT