ಶನಿವಾರ, ಸೆಪ್ಟೆಂಬರ್ 18, 2021
21 °C

ಕ್ರಸ್ಟ್ ಗೇಟ್ ಮಟ್ಟ ತಲುಪಿದ ಲಿಂಗನಮಕ್ಕಿ ಅಣೆಕಟ್ಟೆ ಜಲಮಟ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರ್ಗಲ್: ನಿರಂತರ ಮಳೆಯಿಂದಾಗಿ ಲಿಂಗನಮಕ್ಕಿ ಅಣೆಕಟ್ಟೆಗೆ ನೀರು ಹರಿದುಬರುತ್ತಿದ್ದು, ನೀರಿನ ಮಟ್ಟ ಕ್ರಸ್ಟ್ ಗೇಟ್ ತಳಮಟ್ಟ ದಾಟಿದೆ. (1,796.60 ಅಡಿ)

‘1,819 ಅಡಿ ಗರಿಷ್ಠ ಮಟ್ಟ ಜಲಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ 1,795 ಅಡಿಯನ್ನು ಬೆಡ್ ಲೆವೆಲ್ ಎಂದು ಗುರುತಿಸಲಾಗಿದೆ. ಈ ಮಟ್ಟದಲ್ಲಿ ಭರ್ತಿಯಾದ ನೀರು ಅಣೆಕಟ್ಟೆಯ ಅರ್ಧ ಭಾಗದ ಸಾಮರ್ಥ್ಯ ಹೊಂದಿರುತ್ತದೆ. ಅಣೆಕಟ್ಟೆ ಭರ್ತಿಯಾಗಬೇಕಾದರೆ ಇನ್ನೂ 22.40 ಅಡಿಗಳಷ್ಟು ನೀರು ಸಂಗ್ರಹ ಆಗಬೇಕಾದ ಅಗತ್ಯವಿದೆ’ ಎಂದು ಕೆಪಿಸಿ ಮುಖ್ಯ ಎಂಜಿನಿಯರ್ ಕಚೇರಿ ಅಧಿಕಾರಿಗಳು ಮಾಹಿತಿ ನೀಡಿದರು.

‘ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ 99.4 ಮಿ.ಮೀ. ಮಳೆಯಾಗಿದ್ದು, ಜಲಾಶಯದ ಒಳಹರಿವು 45,458 ಕ್ಯುಸೆಕ್ ಇದ್ದು, 2,176 ಕ್ಯುಸೆಕ್ ಹೊರಹರಿವು ಇದೆ’ ಎಂದು ಜಲಾಶಯ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್
ಆರ್. ಶಿವಕುಮಾರ್ ಮಾಹಿತಿ ನೀಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು