ಆನವಟ್ಟಿ: ಸಮೀಪದ ಹಾಯ ಗ್ರಾಮದ ಕ್ರೀಡಾಪಟು ಸಂಭ್ರಮ ಅವರು ಬಳ್ಳಾರಿಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ರಾಕೇಟ್ ಬಾಲ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದು, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸಚಿವ ಎಸ್.ಮಧು ಬಂಗಾರಪ್ಪ ಅವರು ಧನಸಹಾಯ ನೀಡಿ, ಶುಭಾಶಯ ತಿಳಿಸಿದ್ದಾರೆ.

ಸಂಭ್ರಮ ಅವರು ಸ್ನಾತಕೋತ್ತರ ಪದವಿಧರೆ(ಎಂಎ) ಬಿಕೆಜಿ ಪೌಂಡೇಷನ್ ಆಶ್ರಯದಲ್ಲಿ ಫೆಬ್ರವರಿ 6ರಿಂದ 8ರ ವರೆಗೆ ಬಳ್ಳಾರಿಯ ಸಂಡೂರಿನಲ್ಲಿ ಆಯೋಜಿಸಿರುವ ರಾಷ್ಟ್ರಮಟ್ಟದ ರಾಕೇಟ್ ಬಾಲ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಈ ಹಿಂದೆ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿ, ಅಲ್ಪ ಅಂತರದಲ್ಲಿ ಸೋಲು ಅನುಭವಿಸಿದ್ದರು. ಈ ವರ್ಷ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.

ಸಚಿವ ಮಧು ಬಂಗಾರಪ್ಪ ಅವರು ಪ್ರತಿಭೆಗಳಿಗೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿದ್ದು, ಅವರ ಕೆಲಸ ಕಾರ್ಯದ ನಡುವೆ ಬೇಟಿ ನೀಡಲು ಸಾಧ್ಯವಾಗಿಲ್ಲ. ಆದರೆ ಕ್ರೀಡಾಪಟುವಿಗೆ ನಮ್ಮ ಮೂಲಕ ನೆರವು ನೀಡಿದ್ದಾರೆ. ಸಂಭ್ರಮ ಅವರು ಕ್ರೀಡಾಕೂಟದಲ್ಲಿ ಜಯಗಳಿಸಲಿ ಎಂದು ಕಾಂಗ್ರೆಸ್ ಆನವಟ್ಟಿ ಬ್ಲಾಕ್ ಅಧ್ಯಕ್ಷ ಸದಾನಂದ ಗೌಡ ಬಿಳಗಲಿ ತಿಳಿಸಿದರು.

ಈ ಸಂದರ್ಭದಲ್ಲಿ ಆನವಟ್ಟಿ ಬ್ಲಾಕ್ ಅಧ್ಯಕ್ಷ ಸದಾನಂದ ಗೌಡ ಬಿಳಗಲಿ, ಗೆಂಡ್ಲ ಘಟಕದ ಅಧ್ಯಕ್ಷ ಜಿ.ಎಸ್ ವೀರೇಶ್, ಹಾಯ ಘಟಕದ ಅಧ್ಯಕ್ಷ ಕೃಷ್ಣಪ್ಪ ಮುಖಂಡರಾದ ಶ್ರೀಕಾಂತ ಕುಬಟೂರು, ಗಂಗಪ್ಪ, ಪ್ರೀತಮ್ ಹಾಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.