ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ನಾಳೆಯಿಂದ ‘ನವ ಭಾರತ ಮೇಳ’

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಟಿ.ಮೇಘರಾಜ್‌ ಹೇಳಿಕೆ
Last Updated 4 ಅಕ್ಟೋಬರ್ 2021, 4:02 IST
ಅಕ್ಷರ ಗಾತ್ರ

ಶಿವಮೊಗ್ಗ: ಬಿಜೆಪಿ ಜಿಲ್ಲಾ ಯುವ ಮೋರ್ಚಾದಿಂದ ಅ.5ರಿಂದ 7ರವರೆಗೆ ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ವೀರಭದ್ರ ಚಲನಚಿತ್ರ ಮಂದಿರದಲ್ಲಿ ‘ನವಭಾರತ ಮೇಳ’ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಟಿ.ಮೇಘರಾಜ್‌ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ, ಮಾಜಿ ಸಚಿವ ಸುರೇಶ್ ಕುಮಾರ್, ಆಯನೂರು ಮಂಜುನಾಥ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಎರಡನೇ ದಿನ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಮತ್ತು ಸಂಸದ ಬಿ.ವೈ. ರಾಘವೇಂದ್ರ ಭಾಗಿಯಾಗಲಿದ್ದಾರೆ. ಸಮಾರೋಪದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ವೈ. ಯಡಿಯೂರಪ್ಪ ಭಾಗವಹಿಸುವರು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಅಂಗವಾಗಿ ಸೆ.17ರಿಂದ ಆರಂಭಗೊಂಡ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ. ಜನ್ಮದಿನ ಪಟಾಕಿ, ಭಾಷಣಕ್ಕೆ ಸೀಮಿತವಾಗದೆ ಮಾದರಿಯಾಗುವ ಸೇವೆಗಳಿಗೆ ಸಾಕ್ಷಿಯಾಗಿದೆ. 25,305 ಪೋಸ್ಟ್‌ ಕಾರ್ಡ್‌ಗಳನ್ನು ಪ್ರಧಾನಿಗೆ ಬರೆಯಲಾಗಿದೆ. ದೇಶದಲ್ಲಿ 74 ನದಿ ಮೂಲಗಳಲ್ಲಿ ಪ್ಲಾಸ್ಟಿಕ್‌ ಮುಕ್ತ ಮಾಡಲಾಗಿದೆ. 15 ಸಾವಿರ ಜನ ಪ್ಲಾಸ್ಟಿಕ್‌ ಮುಕ್ತದ ಪ್ರತಿಜ್ಞೆ ಮಾಡಿದ್ದಾರೆ ಎಂದರು.

ಎಸ್. ದತ್ತಾತ್ರಿ ನೇತೃತ್ವದಲ್ಲಿ ಗಾಂಧಿಬಜಾರ್‌ನಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ರೋಟರಿ ಕ್ಲಬ್ ಮತ್ತು ಮೆಗ್ಗಾನ್ ಆಸ್ಪತ್ರೆಯಲ್ಲಿ 11 ರಕ್ತದಾನ ಶಿಬಿರ ನಡೆಸಿದ್ದು, 851 ಯುನಿಟ್ ರಕ್ತ ಸಂಗ್ರಹಿಸಲಾಗಿದೆ. 19 ಕಡೆ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗಿದೆ. 350 ಮಂದಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದು, 3086 ಜನರನ್ನು ತಪಾಸಣೆ ಮಾಡಲಾಗಿದೆ. 355 ಮಂದಿಗೆ ಕೃತಕ ಕಾಲು ಜೋಡಣೆ ಮಾಡಲಾಗಿದೆ. ವೃದ್ಧಾಶ್ರಮಗಳಿಗೆ ಹಣ್ಣು ಹಂಪಲು ಹಂಚಲಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮಗಳ ವಿವರ:ಅ.5ರಂದು ಬೆಳಿಗ್ಗೆ 10ಕ್ಕೆ ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಸಚಿವ ಆರಗ ಜ್ಞಾನೇಂದ್ರ ನವಭಾರತ ಮೇಳಕ್ಕೆ ಚಾಲನೆ ನೀಡುವರು. ಬೆಳಿಗ್ಗೆ 11ಕ್ಕೆ ‘ಸುಶಾಸನ’ ಕುರಿತು ಸಂವಾದ ನಡೆಯಲಿದೆ. ಮಧ್ಯಾಹ್ನ 1ರಿಂದ 4 ಚಲನಚಿತ್ರ ಪ್ರದರ್ಶನ, ಸಂಜೆ 4.30ರಿಂದ 6.30ರವರೆಗೆ ನೃತ್ಯ ಸ್ಪರ್ಧೆ ನಡೆಯಲಿದೆ.

ಅ.6ರಂದು ಬೆಳಿಗ್ಗೆ 8 ರಿಂದ 9 ರವರೆಗೆ ಸಮಾಜದ ಗಣ್ಯರೊಂದಿಗೆ ‘ಚಾಯ್ ಪೆ ಚರ್ಚಾ’, ಬೆಳಿಗ್ಗೆ 9ರಿಂದ 10.30ರವರೆಗೆ ರಸಪ್ರಶ್ನೆ ಮತ್ತು ಚಿತ್ರಕಲೆ, ಬೆಳಿಗ್ಗೆ 10.30ರಿಂದ 11.30 ರವರೆಗೆ ‘ಇಂದು ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ’ ಕುರಿತು ಸಂವಾದ, ಬೆಳಿಗ್ಗೆ 11.30ರಿಂದ 2.30ರವರೆಗೆ ಚಲನಚಿತ್ರ ಪ್ರದರ್ಶನ, ಮಧ್ಯಾಹ್ನ 3.30ರಿಂದ ಸಂಜೆ 4.30 ರವರೆಗೆ ‘ವಿಶ್ವದ ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತದ ಸುರಕ್ಷತೆ’ ಕುರಿತು ಸಂವಾದ ನಡೆಯಲಿದೆ. ಸಂಜೆ 5.30ರಿಂದ 8ರವರೆಗೆ ಚಲನಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ವಿವರಿಸಿದರು.

ಅ. 7ರಂದು ಬೆಳಿಗ್ಗೆ 8ರಿಂದ 9ರವರೆಗೆ ಸಾವಯವ ಕೃಷಿಕರೊಂದಿಗೆ ‘ಚಾಯ್ ಪೇ ಚರ್ಚಾ’, 9ರಿಂದ ರಂಗೋಲಿ ಸ್ಪರ್ಧೆ, 11 ರಿಂದ ‘ಮೋದಿ ಸರ್ಕಾರದಲ್ಲಿ ಮಹಿಳಾ ಸಬಲೀಕರಣ ನಿದರ್ಶನ’ ಕುರಿತ ಸಂವಾದ ವಿಧಾನಪರಿಷತ್ ಮಾಜಿ ಸದಸ್ಯೆ ತಾರಾ ಅನುರಾಧ ಅವರಿಂದ, ಮಧ್ಯಾಹ್ನ 12ರಿಂದ ಚಲನಚಿತ್ರ ಪ್ರದರ್ಶನ, ಸಂಜೆ 5ರಿಂದ ರಾತ್ರಿ 8ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ನಡೆಯಲಿದೆ. ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT