ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಹಧಾಮದಲ್ಲಿ ನೀಲ್‌ಗಾಯ್ ಸಾವು

Last Updated 5 ಜುಲೈ 2021, 4:14 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲಿನ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಪ್ರಾಣಿಗಳ ಪರಸ್ಪರ ಜಗಳದಿಂದ ಒಂದು ನೀಲ್‌ಗಾಯ್‌ ಮೃತಪಟ್ಟಿದೆ.

ನೀಲ್‌ಗಾಯ್‌ ಅನ್ನು ಎರಡು ವರ್ಷಗಳ ಹಿಂದೆ ಮೈಸೂರು ಮೃಗಾಲಯದಿಂದ ತರಲಾಗಿತ್ತು. ಸಿಂಹಧಾಮದಲ್ಲಿ ಈಚೆಗಷ್ಟೇ ಜಿಂಕೆಗಳು ಹಾಗೂ ನೀಲ್‍ಗಾಯ್‌ಗಳಿಗಾಗಿ ಪ್ರತ್ಯೇಕವಾಗಿ ಕೇಜ್‌ಗಳನ್ನು ನಿರ್ಮಾಣ ಮಾಡಲಾಗಿತ್ತು. ಜಿಂಕೆಗಳ ಕೇಜ್‌ನಿಂದ ನೀಲ್‌ಗಾಯ್‌ಗಳನ್ನು ಸ್ಥಳಾಂತರ ಮಾಡುವ ಸಂದರ್ಭದಲ್ಲಿ ಒಂದು ನೀಲ್‌ಗಾಯ್‌ ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ನೀಲ್‌ಗಾಯ್‌ ಸಾವಿಗೆ ಪರಸ್ಪರ ಜಗಳವೇ ಕಾರಣ ಎಂದೂ ಹೇಳಲಾಗುತ್ತಿದೆ.

ನೀಲ್‌ಗಾಯ್‌ ಮೃತಪಟ್ಟು ಮೂರು ದಿನಗಳು ಕಳೆದಿವೆ. ಪಶುವೈದ್ಯ ಡಾ.ರಾಜೇಶ್ ಮರಣೋತ್ತರ ಪರೀಕ್ಷೆಯನ್ನು ನಡೆಸಿ, ಅಂಗಾಂಗಳ ಮಾದರಿಯನ್ನು ಬೆಂಗಳೂರಿನ ಹೆಬ್ಬಾಳ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ.

ಸಿಂಹಧಾಮದಲ್ಲಿ 19 ನೀಲ್‌ಗಾಯ್‌ಗಳಿದ್ದು, ಈಗ ಅವುಗಳ ಸಂಖ್ಯೆ 18ಕ್ಕೆ ಇಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT