ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರ | ಸರ್ಕಾರಿ ಶಾಲೆಗೆ ಆನ್‌ಲೈನ್‌ ‘ಸಿರಿ’

ಸಿರಿವಂತೆ ಶಾಲೆಯ ಸಿಬ್ಬಂದಿ ಸಂದೀಪ್ ಎಳ್ಳಾರೆ ಆಸಕ್ತಿಯಿಂದ ಸ್ಮಾರ್ಟ್ ಆದ ಶಾಲೆ
Last Updated 28 ಜುಲೈ 2020, 20:14 IST
ಅಕ್ಷರ ಗಾತ್ರ

ಸಾಗರ: ನೆಲಕ್ಕೆ ವೆಟ್ರಿಫೈಡ್ ಟೈಲ್ಸ್, ಗ್ರಾನೈಟ್ ಅಳವಡಿಸಿದ ಟೇಬಲ್‌ಗಳ ಮೇಲೆ ಅಚ್ಚುಕಟ್ಟಾಗಿ ಜೋಡಿಸಿದ 21 ಕಂಪ್ಯೂಟರ್‌ಗಳು. ಅತ್ಯಾಧುನಿಕ ತಂತ್ರಜ್ಞಾನದ ಪ್ರೊಜೆಕ್ಟರ್, ಕರ್ಣಾನಂದ ನೀಡುವ ಸ್ಪೀಕರ್‌ಗಳು, ವಿಶಾಲ ಪರದೆಯ ಮೇಲೆ ಚಿತ್ರ ಮೂಡುತ್ತಿದ್ದಂತೆ ಮಾಯಾಲೋಕಕ್ಕೆ ಕರೆದೊಯ್ದ ಅನುಭವ...

ಇದು ಸಾಗರಕ್ಕೆ ಸಮೀಪದ ಸಿರಿವಂತೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಆನ್‌ಲೈನ್ ತರಗತಿಯ ಸ್ಮಾರ್ಟ್‌ ಕ್ಲಾಸ್ ಕೊಠಡಿಗೆ ಪ್ರವೇಶಿಸಿದರೆ ಆಗುವ ಅನುಭವ. ಕೊಠಡಿಯ ಬಾಗಿಲು ಮುಚ್ಚಿ ದೀಪಗಳನ್ನು ಆರಿಸಿ ಪ್ರೊಜೆಕ್ಟರ್ ಮೂಲಕ ಗೋಡೆಯ ಮೇಲೆ ಚಿತ್ರಗಳು ಮೂಡುವಂತೆ ಮಾಡಿದರೆ ದೊಡ್ಡ ನಗರದ ಸುಸಜ್ಜಿತ ಮಾಲ್‌ನ ಪಿವಿಆರ್‌ನಲ್ಲಿ ಇರುವಂತೆ ಭಾಸವಾಗುತ್ತದೆ.

ಇದೆಲ್ಲವನ್ನೂ ಸಾಧ್ಯವಾಗಿಸಿದ್ದು ಶಾಲೆಯ ಕಚೇರಿಯಲ್ಲಿ ಆಡಳಿತ ಸಹಾಯಕರಾಗಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಸಂದೀಪ್ ಎಳ್ಳಾರೆ.ಆನ್‌ಲೈನ್ ತರಗತಿಯ ಕೊಠಡಿ, ಕುಸಿದ ಪ್ರಾರ್ಥನಾ ವೇದಿಕೆ ನವೀಕರಣ, ಎಲ್ಲಾ ತರಗತಿ ಗಳಿಗೂ ವಿದ್ಯುತ್ ದೀಪಗಳ ಸೌಲಭ್ಯ ಸೇರಿ ಹಲವು ಕೆಲಸ ಗಳಿಗೆ ವೈಯಕ್ತಿಕವಾಗಿ ಅಂದಾಜು ₹ 7 ಲಕ್ಷ ವೆಚ್ಚ ಮಾಡಿದ್ದಾರೆ.

‘ಆನ್‌ಲೈನ್ ಶಿಕ್ಷಣದ ಸಾಧಕ-ಬಾಧಕಗಳ ಬಿರುಸಿನ ಚರ್ಚೆಗಳು ನಡೆಯುತ್ತಿವೆ. ಹಳ್ಳಿ ಶಾಲೆಯಲ್ಲಿ ವಿದ್ಯುತ್ ಎಲ್ಲಿರುತ್ತೆ, ನೆಟ್‌ವರ್ಕ್ ಸಿಗು ತ್ತೇನ್ರಿ ಎಂದು ಪ್ರಶ್ನೆ ಕೇಳುವವರಿದ್ದಾರೆ. ಉಳಿದ ಶಾಲೆಗಳ ಪರಿಸ್ಥಿತಿ ಈ ಪ್ರಶ್ನೆಗಳಿಗೆ ಉತ್ತರ ಕೊಡಲು ಸಮರ್ಥವಾಗಿ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಸಿರಿವಂತೆಯ ಸರ್ಕಾರಿ ಪ್ರೌಢಶಾಲೆಗೆ ಮಾತ್ರ ಆನ್‌ಲೈನ್ ಸಿರಿವಂತಿಕೆ ಪ್ರಾಪ್ತವಾಗುವ ಮೂಲಕ ಶಾಲೆ ಸ್ಮಾರ್ಟ್ ಆಗಿದೆ’ ಎನ್ನುತ್ತಾರೆ ಸಿರಿವಂತೆ ಚಂದ್ರಶೇಖರ್‌.

ಡಿಡಿಪಿಐ, ತಾಲ್ಲೂಕಿನ ಕ್ಷೇತ್ರ ಶಿಕ್ಷ ಣಾಧಿಕಾರಿ ಶಾಲೆಗೆ ಭೇಟಿ ನೀಡಿ ಸ್ಮಾರ್ಟ್ ಕೊಠಡಿ ನೋಡಿ ಮೆಚ್ಚುಗೆ ಸೂಚಿಸಿ ದ್ದಾರೆ. ಜನವರಿ ಯಲ್ಲಿಯೇ ಕೊಠಡಿ ಸಿದ್ಧವಾಗಿದ್ದು, ಪ್ರಾಯೋಗಿಕ ತರಗತಿ ನಡೆಸಲಾಗಿತ್ತು. ಆದರೆ ಕೊರೊನಾ ಕಾರಣಕ್ಕೆ ಈ ವರ್ಷ ಶಾಲೆಗಳು ಆರಂಭವಾಗುವುದು ತಡವಾದ್ದರಿಂದ ಅಧಿಕೃತ ಉದ್ಘಾಟನೆ ಇನ್ನೂ ಆಗಿಲ್ಲ. ಆದರೂ ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಸದಸ್ಯ ರಾಜಶೇಖರ ಗಾಳಿಪುರ.

****

ಸಿರಿವಂತೆ ಶಾಲೆಯಲ್ಲಿ ಸ್ಮಾರ್ಟ್ ಕೊಠಡಿ ಸಿದ್ಧಗೊಂಡಿರುವುದು ಹೆಮ್ಮೆ. ಇದಕ್ಕೆ ಖರ್ಚಾಗಿರುವ ಹಣ ವನ್ನು ಶಾಸಕರ ಅನುದಾನದಿಂದ ಕೊಡಿಸುವುದಕ್ಕೆ ಪ್ರಯತ್ನಿಸುತ್ತೇನೆ.
-ರಾಜಶೇಖರ ಗಾಳಿಪುರ, ಜಿಲ್ಲಾ ಪಂಚಾಯಿತಿ ಸದಸ್ಯ

ಎಲ್ಲದಕ್ಕೂ ಸರ್ಕಾರದ ನೆರವು ಕಾಯದೆ ಇಚ್ಛಾಶಕ್ತಿ ಇದ್ದರೆ ತಾವು ಕೆಲಸ ಮಾಡುವ ಸಂಸ್ಥೆಯನ್ನು ಹೇಗೆ ಉನ್ನತೀಕರಿಸಬಹುದು ಎಂಬು ದಕ್ಕೆ ಸಂದೀಪ್ ಸಾಕ್ಷಿಯಾಗಿದ್ದಾರೆ.
-ಸಿರಿವಂತೆ ಚಂದ್ರಶೇಖರ್, ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT