ಸೊರಬ: ತಾಲ್ಲೂಕಿನಲ್ಲಿ ಭತ್ತ ಕಟಾವು ಕಾರ್ಯ ಆರಂಭವಾಗಿದೆ. ಕನಿಷ್ಠ ಬೆಂಬಲ ಬೆಲೆಗಿಂತ ಧಿಕ ದರವು ಮುಕ್ತ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಕಾರಣ ಭತ್ತ ಖರೀದಿ ಕೇಂದ್ರದತ್ತ ಮುಖ ಮಾಡದ ಬೆಳೆಗಾರರು ಗಿರಣಿಗಳಿಗೇ ಭತ್ತ ಮಾರಾಟ ಮಾಡುತ್ತಿದ್ದಾರೆ.

ಈ ಹಂಗಾಮಿನಲ್ಲಿ ಸೊರಬ ತಾಲ್ಲೂಕಿನಲ್ಲಿ 19,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಅಂದಾಜು ₹ 95,000 ಕ್ವಿಂಟಲ್ ಭತ್ತದ ಇಳುವರಿ ನಿರೀಕ್ಷೆ ಇದೆ. ಅನೇಕ ಸುಧಾರಿತ ತಳಿಯ ಭತ್ತ ಬೆಳೆಯಲಾಗಿದ್ದು, ಕಟಾವು ಕಾರ್ಯ ಆರಂಭಗೊಂಡಿದೆ. ಕಳೆದ ವರ್ಷ ಮಾರುಕಟ್ಟೆಯ ದರ ಕ್ವಿಂಟಲ್ಗೆ ಕನಿಷ್ಠ ₹ 2,300ರಿಂದ ಗರಿಷ್ಠ ₹ 2,400 ಇತ್ತು. ಇದೀಗ ಸೊರಬ ಮಾರುಕಟ್ಟೆಯಲ್ಲಿ ಭತ್ತ ಖರೀದಿದಾರರು ಸರಾಸರಿ ಪ್ರತಿ ಕ್ವಿಂಟಲ್ ಭತ್ತಕ್ಕೆ ₹ 2,400 ನೀಡುತ್ತಿದ್ದು, ಕೆಲವು ದಿನಗಳ ಹಿಂದೆ ಗರಿಷ್ಠ ₹ 2,600ವರೆಗೆ ದರ ನಿಗದಿಯಾಗಿದೆ. ಈ ದರದಲ್ಲಿ ಹಲವು ರೈತರು ಭತ್ತ ಮಾರಾಟ ಮಾಡಿದ್ದಾರೆ.

ಕನಿಷ್ಠ ಬೆಂಬಲಬೆಲೆ ಯೋಜನೆ ಅಡಿ ಆಹಾರ ನಿಗಮದಿಂದ ಬೆಂಬಲಬೆಲೆಯ ಭತ್ತದ ಖರೀದಿ ಕೇಂದ್ರ ತೆರೆಯಲಾಗಿದೆ. ಸಾಮಾನ್ಯ ಭತ್ತ ಪ್ರತಿ ಕ್ವಿಂಟಲ್ಗೆ ₹ 2,369 ಹಾಗೂ ‘ಎ’ ಗ್ರೇಡ್ ಭತ್ತಕ್ಕೆ ₹ 2,389 ನಿಗದಿಪಡಿಸಲಾಗಿದೆ. ಖರೀದಿ ಪ್ರಕ್ರಿಯೆ ಫೆ. 28ರವರೆಗೆ ನಡೆಯಲಿದೆ. ಈವರೆಗೂ 100 ಮಂದಿ ರೈತರು ಬೆಂಬಲಬೆಲೆ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿದ್ದು, 4,230 ಕ್ವಿಂಟಲ್ ಭತ್ತ ಖರೀದಿಯಾಗುವ ನಿರೀಕ್ಷೆ ಇದೆ ಎಂದು ಆಹಾರ ನಿಗಮ ವ್ಯವಸ್ಥಾಪಕಿ ಡಿ.ಪವಿತ್ರಾ ‘ಪ್ರಜಾವಾಣಿ’ಗೆ ತಿಳಿಸಿದರು.

ರೈತರು ತಾವು ಬೆಳೆದ ಭತ್ತಕ್ಕೆ ಆರಂಭದಲ್ಲಿ ಮಾರುಕಟ್ಟೆ ದರ ಪರಿಶೀಲಿಸುತ್ತಾರೆ. ಅದಕ್ಕಿಂತ ಹೆಚ್ಚಿನ ದರ ಖರೀದಿ ಕೇಂದ್ರದಲ್ಲಿದ್ದರೆ ಮಾತ್ರ ಆಸಕ್ತಿ ತೋರುತ್ತಾರೆ. ಮಾರುಕಟ್ಟೆ ದರ ಹೆಚ್ಚಿದ್ದರೆ, ಅಲ್ಲಿಯೇ ಭತ್ತ ಮಾರುತ್ತಾರೆ ಎಂದು ರೈತರು ಹೇಳುತ್ತಾರೆ.

‘ಸರ್ಕಾರ ಪ್ರಸಕ್ತ ಸಾಲಿನಲ್ಲಿ ಭತ್ತ ಖರೀದಿ ಕೇಂದ್ರಗಳ ಮೂಲಕ ಖರೀದಿಗೆ ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆಗಿಂತ ಮಾರುಕಟ್ಟೆಯಲ್ಲಿ ಹೆಚ್ಚು ದರ ಸಿಗುತ್ತಿದೆ. ಹೀಗಾಗಿ ಅಲ್ಲಿಯೇ ಮಾರಾಟ ಮಾಡಲು ಬಹುತೇಕ ರೈತರು ಒಲವು ತೋರಿಸುತ್ತಿದ್ದಾರೆ. ಉತ್ತಮ ದರ ಸಿಗುವ ನಿರೀಕ್ಷೆಯಲ್ಲಿ ಭತ್ತದ ಕೊಯ್ಲು ಆರಂಭಿಸಿದ್ದೇವೆ’ ಎಂದು ರೈತ ಮಹದೇವಪ್ಪ ಹೇಳಿದರು.

ಕೃಷಿ ಇಲಾಖೆಯಿಂದ ಗ್ರೇಡರ್ ನೇಮಿಸಿ ಭತ್ತದ ಗುಣಮಟ್ಟವನ್ನು ಪರಿಶೀಲಿಸಲಾಗುವುದು. ಭತ್ತ ಕಟ್ಟಾವು ಮಾಡಿ ಬಣವೆ ಹಾಕುವಾಗ ಹುಲ್ಲು ಚೆನ್ನಾಗಿ ಒಣಗಿಸಕಬೇಕು. ಆಗ ಮಾತ್ರ ಭತ್ತ ಚೆನ್ನಾಗಿ ಉಳಿದು ದರವು ಚೆನ್ನಾಗಿ ಸಿಗುತ್ತದೆ
ಆಶಾ ಸಹಾಯಕ ನಿರ್ದೇಶಕಿ ಕೃಷಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.