ಸೋಮವಾರ, ಜೂಲೈ 6, 2020
22 °C

ಕಾನ್ಪುರ ವೈದ್ಯೆ ವಿರುದ್ಧ ಕ್ರಮಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಮುಸ್ಲಿಮರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಕಾನ್ಪುರ ವೈದ್ಯೆ ಡಾ.ಆರತಿ ಲಾಲ್ ಚಂದಾನಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶಿವಮೊಗ್ಗ ಪೀಸ್‌ ಆರ್ಗನೈಸೇಷನ್ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಮುಸ್ಲಿಮರ ವಿರುದ್ಧ ಕೀಳುಮಟ್ಟದ ಆಪಾದನೆ ಮಾಡಿದ್ದಾರೆ. ವೈದ್ಯಕೀಯ ವೃತ್ತಿಗೆ ಕಳಂಕ ತಂದಿದ್ದಾರೆ. ಅವರ ವೈದ್ಯಕೀಯ ಮಾನ್ಯತೆ, ಆಸ್ಪತ್ರೆ  ಪರವಾನಗಿ ರದ್ದುಗೊಳಿಸಬೇಕು. ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವೈದ್ಯ ವೃತ್ತಿ ಸ್ವೀಕರಿಸುವಾಗ ಎಲ್ಲರನ್ನು ಸಮಾನವಾಗಿ ಕಾಣುತ್ತೇವೆ ಎಂದು ಪ್ರಮಾಣ ಮಾಡುತ್ತಾರೆ. ರೋಗ ವಾಸಿಮಾಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ ಎಂದು ಹೇಳುತ್ತಾರೆ. ಆದರೆ, ಚಂದಾನಿ ಸಂವಿಧಾನ ಉಲ್ಲಂಘಿಸಿ ವೈದ್ಯ ವೃತ್ತಿಯ ಪ್ರಮಾಣವಚನ ಮರೆತಿದ್ದಾರೆ. ಮುಸ್ಲಿಮರು, ತಬ್ಲಿಗ್‌ ಜಮಾತ್ ರೋಗಿಗಳ ಕುರಿತು ತಪ್ಪು ಮಾಹಿತಿಗಳನ್ನು ಮಾಧ್ಯಮಗಳು, ಸರ್ಕಾರಕ್ಕೆ ನೀಡಿದ್ದಾರೆ ಎಂದು ಆರೋಪಿಸಿದರು.

ಮುಸ್ಲಿಮರು ಆಸ್ಪತ್ರೆಯಲ್ಲಿ ಅಶಾಂತಿ ಮೂಡಿಸುತ್ತಿದ್ದಾರೆ. ಮಾಂಸದ ಆಹಾರ ಕೇಳುತ್ತಿದ್ದಾರೆ ಎಂದು ಸುಳ್ಳು ಆಪಾದನೆ ಮಾಡಿದ್ದಾರೆ. ಮುಸ್ಲಿಮರು ಭಯೋತ್ಪಾದಕರು.  ಜೈಲಿಗೆ ಕಳಿಸಬೇಕಾದವರಿಗೆ ವಿಐಪಿ ಚಿಕಿತ್ಸೆ ನೀಡಿ, ದೇಶದ ಸಂಪನ್ಮೂಲ ಖಾಲಿ ಮಾಡುತ್ತಿದ್ದೇವೆ. ಆತಿಥ್ಯ, ಚಿಕಿತ್ಸೆ, ಔಷಧ, ಆಂಬುಲೆನ್ಸ್ ಮೇಲೆ ವ್ಯರ್ಥ ಖರ್ಚು ಮಾಡುತ್ತಿದ್ದೇವೆ. ಅವರಲ್ಲನ್ನೆಲ್ಲ ಕಾಡಿಗೆ ಕಳುಹಿಸಬೇಕು ಎಂದು ಬಾಯಿಗೆ ಬಂದಂತೆ ಮಾತನಾಡಿದ್ದಾರೆ ಎಂದು ದೂರಿದರು.

ಸಂಘಟನೆಯ ಅಧ್ಯಕ್ಷ ರಿಯಾಜ್ ಅಹಮದ್‌, ಸೈಯದ್ ಬಷೀರ್, ಜಾವಿದ್, ಸಲೀಮ್ ಉಲ್ಲಾ, ಅಯೂಬ್ ಖಾನ್ , ಖಲೀಮುಲ್ಲಾ, ನವೀದ್ ಮನವಿ ಸಲ್ಲಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು