ಗುರುವಾರ , ಜುಲೈ 29, 2021
27 °C

ಆಸ್ಪತ್ರೆಯಲ್ಲಿ ವ್ಯಕ್ತಿ ಸಾವು: ವೈದ್ಯರ ವಿರುದ್ಧ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭದ್ರಾವತಿ: ಹಲ್ಲು ಕೀಳಿಸಲು ಹೋದ‌ ವ್ಯಕ್ತಿ ಕ್ಲಿನಿಕ್‌ನಲ್ಲಿ ಮೃತಪಟ್ಟಿದ್ದು, ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ಶನಿವಾರ ದೂರು ದಾಖಲಾಗಿದೆ.

ಜನ್ನಾಪುರ ವಾಸಿ ಮೋಹನಮೂರ್ತಿ (40) ಮೃತಪಟ್ಟವರು.

‘ಮೋಹನಮೂರ್ತಿ ಶನಿವಾರ ಬಿ.ಎಚ್. ರಸ್ತೆಯ ದಂತ ವೈದ್ಯರಾದ ಡಾ. ದೀಪಾಕಿತ್ತೂರು ಬಳಿ ಹಲ್ಲು ಕೀಳಿಸಲು ಹೋಗಿದ್ದರು. ಡಾ. ಸತೀಶ್ ಅರಿವಳಿಕೆ ಚುಚ್ಚುಮದ್ದು ನೀಡಿದರು. ಕೆಲವೇ ಸಮಯದಲ್ಲಿ ಅವರಿಗೆ
ಹೃದಯಾಘಾತ‌ವಾಗಿದೆ’ ಎಂದು  ಕುಟುಂಬಸ್ಥರು ದೂರು ನೀಡಿದ್ದಾರೆ.

ಪ್ರಕರಣ ದಾಖಲಾಗಿದ್ದು, ಸಿಪಿಐ ರಾಘವೇಂದ್ರ ಕಾಂಡಿಕೆ ತನಿಖೆ ಕೈಗೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು